ಸ್ಥಳವಿಲ್ಲವಯ್ಯ ಭಾಗವತರೆ

ಸ್ಥಳವಿಲ್ಲವಯ್ಯ ಭಾಗವತರೆ

( ರಾಗ ಕಾಂಭೋಜ. ಅಟ ತಾಳ) ಸ್ಥಳವಿಲ್ಲವಯ್ಯ ಭಾಗವತರೆ ಒಳಗೆ ಹೊರಗೆ ಸಂದಣಿ ಭಾಳ ತುಂಬಿದೆ ||ಪ|| ಐದಕ್ಕೆ ಇದರೊಳು ಉಂಟು, ಮ- ತ್ತೈದು ಐದು ಮಂದಿಗಳು ಬೇರುಂಟು ಐದು ನಾಲ್ಕು ದ್ವಾರಗಳುಂಟು, ನಾವು ಬೈದರೆ ನಿಮ್ಮದೇನು ಹೋದೀತು ಗಂಟು || ಆರು ಮಂದಿ ಮಕ್ಕಳುಂಟು(/ವಕ್ಕಲುಂಟು) ಮ- ತ್ತಾರು ಮಂದಿ ಪ್ರೇರಕರುಂಟು ಪ್ರೇರಕರಿಗೆ ಕರ್ತರುಂಟು, ವಿ- ಚಾರ ಮಾಡಲಿಕ್ಕೆ ನಿಮ್ಮದೇನು ತಂಟು || ಅತ್ತೆಯೆಂಬೊಳು ಬಲು ಖೋಡಿ ಎ- ನ್ನೊತ್ತಿ ಆಳುವ ಪುರುಷ ಹೇಡಿ ಮತ್ತೆ ಮಾವ ಅಡನಾಡಿ, ಸರಿ- ಹೊತ್ತಿಗೆ ಬಾಹೋನು ಮೈದುನ ಒಡಿ || ನೆಗಣ್ಣಿಯೆಂಬೋಳು ಮುಂಗೋಪಿ, ಮಲ- ಮಗಳು ಕಂಡರೆ ಸೇರಳು ಮಹತಾಪಿ ಹಗೆಗಾರತ್ತಿಗೆ ಬಲು ಕೋಪಿ, ಇದರ ಬಗೆ ತಿಳಿಯದ ನಾದಿನಿ ಮಹಾಪಾಪಿ || ಎಷ್ಟು ಹೇಳಲಿ ನಿಮಗೆಲ್ಲ, ಈ ಕಷ್ಟ ಸಂಸಾರದೊಳಗಿಷ್ಟು ಸುಖವಿಲ್ಲ ಸೃಷ್ಟಿಗೊಡೆಯ ತಾಂ ಬಲ್ಲ, ಸೃಷ್ಟೀಶ ದಿಟ್ಟ ಪುರಂದರವಿಠಲ ತಾಂ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು