ಸಿಟ್ಟು ಮಾಡಿದರುಂಟೆ

ಸಿಟ್ಟು ಮಾಡಿದರುಂಟೆ

( ರಾಗ ಕಾಂಭೋಜ. ಝಂಪೆ ತಾಳ) ಸಿಟ್ಟು ಮಾಡಿದರುಂಟೆ ಶ್ರೀ ಕೃಷ್ಣನಲ್ಲಿ ||ಪ|| ಕೊಟ್ಟು ಹುಟ್ಟದೆ ಮುನ್ನ ಈ ಸೃಷ್ಟಿಯಲ್ಲಿ ||ಅ|| ನೆಲವ ತೋಡಿದರಿಲ್ಲ ಛಲದಿ ಹೋರಿದರಿಲ್ಲ ಕುಲಗೆಟ್ಟರಿಲ್ಲ ಕುಪ್ಪರಿಸಿದರು ಇಲ್ಲ ಬಲವ ತೋರಿದರಿಲ್ಲ ಕೆಲಕೆ ಸಾರಿದರಿಲ್ಲ ತಲೆಯ ಕಲ್ಲಿಗೆ ಹಾಯ್ದು ಒಡಕೊಂಡರಿಲ್ಲ || ಧರಣಿಯಾಳುವ ದೊರೆಯ ಓಲೈಸಿದರು ಇಲ್ಲ ಉರಗನ ಬಿಲದೊಳಗೆ ಹೋದರು ಇಲ್ಲ ಗಿರಿಗಹ್ವರಂಗಳಲಿ ತೊಳಲಿ ಬಳಲಿದರಿಲ್ಲ ಬರಿದೆ ಹಲವರಿಗೆ ಬಾಯ್ದೆರೆದರಿಲ್ಲ || ದೊಂಬಲಾಗವ ಹಾಕಿ ಡಿಂಬ(/ದಿಂಡು) ತಿರುಗಿದರಿಲ್ಲ ತುಂಬಿರುವ ಊರೊಳಗೆ ತಿರಿತಿಂದರಿಲ್ಲ ಅಂಬುಜಾಕ್ಷ ಪುರಂದರವಿಠಲನ್ನ ಪಾ- ದಾಂಬುಜವ ನೆನೆನೆನೆದು ಸುಖಿಯಾಗು ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು