ಶ್ರೀಪತಿಯು ನಮಗೆ ಸಂಪದವೀಯಲಿ

ಶ್ರೀಪತಿಯು ನಮಗೆ ಸಂಪದವೀಯಲಿ

( ರಾಗ ಮುಖಾರಿ. ಛಾಪು ತಾಳ) ಶ್ರೀಪತಿಯು ನಮಗೆ ಸಂಪದವೀಯಲಿ ||ಪ|| ವಾಣೀಪತಿಯು ನಮಗೆ ಧೀರ್ಘಾಯು ಕೊಡಲಿ ||ಅ|| ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ ಹರ ನಿತ್ಯ ನಮಗೆ ಸಹಾಯಕನಾಗಲಿ ನರರೊಳುನ್ನತವಾದ ನಿತ್ಯಭೋಗಂಗಳನು ಪುರುಹೂತ ಪೂರ್ಣ ಮಾಡಿಸಲಿ ನಮಗೆ || ವಿನುತಸಿದ್ಧಿಪ್ರದನು ವಿಘ್ನೇಶ ದಯದಿಂದ ನೆನೆದ ಕಾರ್ಯಗಳೆಲ್ಲ ನೆರವೇರಿಸಲಿ ದಿನದಿನದಿ ಧನ್ವಂತ್ರಿಯಾಪತ್ತುಗಳ ಕಳೆದು ಮನಹರುಷವವಿತ್ತು ಮನ್ನಿಸಲಿ ಬಿಡದೆ || ನಿರತ ಸುಜ್ಞಾನವನು ಈವ ಮಧ್ವರಾಯ ಗುರುಗಳಾಶೀರ್ವಾದ ನಮಗಾಗಲಿ ಪುರಂದರವಿಠಲನ್ನ ಕರುಣದಿಂದಲಿ ಸಕಲ ಸುರರೊಲುಮೆ ನಮಗೆ ಸುಸ್ಥಿರವಾಗಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು