ಸುಳ್ಳು ನಮ್ಮಲ್ಲಿಲ್ಲವಯ್ಯ
( ರಾಗ ಪೂರ್ವಿ. ಆದಿ ತಾಳ)
ಸುಳ್ಳು ನಮ್ಮಲ್ಲಿಲ್ಲವಯ್ಯ
ಸುಳ್ಳು ನಮ್ಮಲ್ಲಿಲ್ಲ ( / ಸುಳ್ಳೇ ನಮ್ಮನಿ ದೇವರು) ||ಪ||
ಇಲಿಯು ಒಲೆಯ ಚಾಚ್ವದ ಕಂಡೆ
ಬೆಕ್ಕು ಭಕ್ಕರಿ ಮಾಡ್ವುದಕಂಡೆ
ಮೆಣಸಿನಕಾಯಿ ಕಂಡೆನಪ್ಪ ಒನಕೆ ಗಡತರ ||
ಕಪ್ಪೆ ಪಾತರ ಕುಣಿವುದ ಕಂಡೆ
ಏಡಿ ಮದ್ದಳೆ ಬಡೆವುದ ಕಂಡೆ
ಮೆಕ್ಕಿ ತೆನೆಯ ಕಂಡೇನಪ್ಪ ಕೆಕ್ಕಿ ಗಡತರ ||
ಅರಸಿನ ಬಿತ್ತುವುದ ಕಂಡೆ
ಕಸಕಸೆ ನೆನೆಸೋದು ಕಂಡೆ
ಪುರಂದರವಿಠಲನ ಪಾದವ ಕಂಡೆ ಪರ್ವತ ಗಡತರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments