ಮನಸು ನಿನ್ನ ಮೇಲೆ ಬಹಳ

ಮನಸು ನಿನ್ನ ಮೇಲೆ ಬಹಳ

(ರಾಗ ಮಧುಮಾಧವಿ. ಆಟ ತಾಳ )

 

ಮನಸು ನಿನ್ನ ಮೇಲೆ ಬಹಳ

ಎನಗನುಕೂಲವಾಗೋದು ಹೇಳ ||ಪ ||

ಮನಸಿಜನಾಟದಿ ಕೂಡುವೆನೆಂದರೆ

ಮನುಜರೆಲ್ಲರು ಕಾಯುವರೆನ್ನ ||ಅ ||

 

ನೆರೆಹೊರೆ ಮನೆಯವರೆಲ್ಲ, ಎನ್ನ

ನೆರಳ ಕಂಡರೆ ಸೇರರಲ್ಲ

ಸರಿಸಖಿಯರೆಲ್ಲ ಸುಮ್ಮನೆ ದೂರ್ವರು

ಬರಿ ಮಾತನಾಡಲು ಸಮಯ ಸಿಗದಲ್ಲ ||

 

ಗಂಡನೆಂಬವನು ಉದ್ದಂಡ, ಎನ್ನ

ಕಂಡರೆ ಕೋಪ ಪ್ರಚಂಡ

ಭಂಡುಗೇಡ್ಯತ್ತಿಗೆ ದಂಡಿಸುವಳು ಕೇಳೆ

ಕಂಡರಿಬ್ಬರನ್ನು ಖಂಡಿಸುವನು ಪ್ರಿಯ ||

 

ಚದುರ ಪುರಂದರವಿಠಲ, ನಾಳೆ

ಮದುವೆ ನಮ್ಮನೇಲಿ ಗದ್ದಲ

ಅದರ ಸಂದಣಿಯಲಿ ಯಾವ್ಯಾವ ಪರಿಯಲಿ

ಮುದದಿಂದ ಕೂಡುವೆ ಮದನತಂತ್ರದಲ್ಲಿ ||

ದಾಸ ಸಾಹಿತ್ಯ ಪ್ರಕಾರ
ಬರೆದವರು