ಪೊಂಗೊಳಲನೂದುತಿಹ ಯದುಕುಲೋತ್ತುಂಗ

ಪೊಂಗೊಳಲನೂದುತಿಹ ಯದುಕುಲೋತ್ತುಂಗ

( ರಾಗ ಆನಂದಭೈರವಿ ಅಟತಾಳ) ಪೊಂಗೊಳಲನೂದುತಿಹ ಯದುಕುಲೋತ್ತುಂಗ ||ಪ|| ತಿಂಗಳಪಾಂಗನೆ ರಜತಶುಭಾಂಗ || ಅ|| ಸಲಿಲಚರ ಧರಾಧರನು ಇಳೆಧರೋಜ್ವಲನೇತ್ರ ಬಲಿಯ ಬೇಡಿದನು ಭೃಗುಕುಲದಿ ಜನಿಸಿ ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ ಹೂಳರ ಸಂಬೋಧಿಸಿದ ಚೆಲುವ ಹಯವವೇರ್ದ || ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ ಅಡವಿಕಿಟಿ ಕಡು ಕೋಪಿ ಕೊಡೆಯಪಿಡಿದನೆ ಕೊಡಲಿ ಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ || ವಾರಿಚರ ಕೂರ್ಮಾವತಾರ ಸುಕರ ಕ್ರೂರ ಧರಣಿಯನಳೆದು ಶೂರರನು ಗೆಲಿದು ನೀರಜಾಕ್ಷಿಯ ತಂದು ನಾರಿಪ್ರಿಯ ವ್ರತವಳಿದು ಏರಿದನು ಹಯವ ಪುರಂದರವಿಠಲ ಜಗದೊಡೆಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು