ರಾಮನಾಮ ರತ್ನಹಾರ ದೊರಕಿತು ಎನಗೆ

ರಾಮನಾಮ ರತ್ನಹಾರ ದೊರಕಿತು ಎನಗೆ

( ರಾಗ ಕಾಂಭೋಜ ಅಟತಾಳ) ರಾಮನಾಮ ರತ್ನಹಾರ ದೊರಕಿತು ಎನಗೆ ||ಪ|| ಪೂರ್ವಪುಣ್ಯದ ಫಲಕೆ ||ಅ|| ಮಚ್ಛನೆಂಬೊ ಮಾಣಿಕ್ಯದ ಹರಳು ಕೂರ್ಮನೆಂಬೊ ಕುಸುರಿಗಳು ವರಹನೆಂಬೊ ಹೊಸ ಮೋಹನದ ಚಿನ್ನ ನರಹರಿಯೆಂಬೊ ನಾಮದ ಸರಮುತ್ತು || ವಾಮನನೆಂಬೊ ಒಲಿವ ಏಕಾವಳಿಯು ಪರಶುರಾಮನೆಂಬೊ ಪಚ್ಚೆಯ ಹರಳು ಕೃಷ್ಣನೆಂಬೊ ಕೀಲುಗಳು ಅತಿ ಕುಶಲದಿಂದಲಿತ್ತು || ಬೌದ್ಧನೆಂಬೊ ಅತಳಗಳ ಬಿಗಿದಿತ್ತು ಬಹು ಬಗಿದಂತಿತ್ತು ಕಲ್ಕಿಯೆಂಬೊ ಆ ಕುಣಿಕೆಯ ಹಚ್ಚಿಟ್ಟು ಪುರಂದರವಿಠಲ ನಾಮದ ಸರಮುತ್ತು ಸೌಭಾಗ್ಯ ನಿಗಳಿಲ್ಲಿತ್ತು ||
ದಾಸ ಸಾಹಿತ್ಯ ಪ್ರಕಾರ
ಬರೆದವರು