ಪುರಂದರ ದಾಸರ ಆರಾಧನೆ

ಪುರಂದರ ದಾಸರ ಆರಾಧನೆ

ಜನವರಿ ೨೫, ೨೦೦೯ ಪುರಂದರದಾಸರ ಆರಾಧನೆಯ ದಿನ - ಪುಷ್ಯ ಬಹುಳ ಅಮಾವಾಸ್ಯೆ. ಕಳೆದ ಆರು ತಿಂಗಳಲ್ಲಿ ಮೊದಲ್ಗೊಂಡ ಹರಿದಾಸ.ಇನ್ ನಲ್ಲಿ ಈಗ ಸುಮಾರು ೨೬೦ ಕ್ಕೂ ಹೆಚ್ಚಿನ ದೇವರನಾಮಗಳಿವೆ ಎನ್ನುವುದನ್ನು ನೋಡಿದರೆ, ಬಹಳ ಸಂತೋಷವಾಗುತ್ತೆ. ಪುರಂದರರ ಲಭ್ಯವಿರುವ ರಚನೆಗಳು ೧೫೦೦ಕ್ಕಿಂತ ಹೆಚ್ಚಿಲ್ಲ ಅನ್ನುವುದನ್ನು ನೆನೆದಾಗ, ಈ ಬೆಳವಣಿಗೆ ದೊಡ್ಡದೇ. ಶ್ರೀಕಾಂತ ಮಿಶ್ರಿಕೋಟಿಯವರ ಜೊತೆ ಒಮ್ಮೆ ಮಾತಾಡುತ್ತಿದ್ದಾಗ ಈ ವರ್ಷದ ಆರಾಧನೆಯಯ ಒಳಗೆ ೧೦೦ ರಚನೆಗಳನ್ನಾದರೂ ಹಾಕುವ ಉದ್ದೇಶವಿದೆ ಎಂದಿದ್ದರು - ಅದಕ್ಕೂ ಹೆಚ್ಚಿನ ರಚನೆಗಳನ್ನು ಕಳೆದ ತಿಂಗಳಲ್ಲಿ ಸೇರಿಸಿದ್ದಾರೆ. ಹಾಗೇ ಇನ್ನೂ ಹಲವು ಆಸಕ್ತರು ಕೂಡ ಈ ಪ್ರಯತ್ನದಲ್ಲಿ ಕೈಜೋಡಿಸಿದ್ದಾರೆ. ಎಲ್ಲರಿಗೂ, ನನ್ನ ಧನ್ಯವಾದಗಳು! ಹೀಗೇ ಮುಂದಿನ ವರ್ಷದೊಳಗೆ ಎಲ್ಲ ರಚನೆಗಳನ್ನೂ, ಇತರ ದಾಸರ ರಚನೆಗಳನ್ನೂ ಹಾಕಲು ಇನ್ನೂ ಹೆಚ್ಚಿನ ಆಸಕ್ತರು ಮುಂದೆ ಬರುತ್ತಾರೆಂಬ ಆಸೆ, ಬರುವರೆಂಬ ನಂಬಿಕೆ ನನ್ನದು. -ಹಂಸಾನಂದಿ