ಹೆಣ್ಣಿಗಿಚ್ಚೈಸುವರೆ ಮೂಢ
(ರಾಗ ಕಾಂಭೋಜಿ. ಝಂಪೆ ತಾಳ )
ಹೆಣ್ಣಿಗಿಚ್ಚೈಸುವರೆ ಮೂಢ, ಇದನು
ಕಣ್ಣು ಮೈ ಮನಗಳಿಂ ಸೋಂಕಲೇ ಬೇಡ
ತಾಯಾಗಿ ಮೊದಲೆ ಪಡೆದಿಹುದು, ಮಾತು
ಜಾಯಾಯೆಂದೆನಿಸಿ ಕಾಮದಿ ಕೆಡಹುವುದು
ಕಾಯದೊಳು ಜನಿಸುತ್ತಲಿಹುದು, ಇಂತು
ಮಾಯೆಯು ನಿನ್ನ ಬಹು ವಿಧದಿ ಕಾಡುತಲಿಹುದು
ಹಿತಶತ್ರುವಾಗಿ ಪೊಂದುವುದು, ನಿಮಿಷ
ರತಿಗೊಟ್ಟು ನಿತ್ಯ ಮುಕ್ತಿಯಾಶಾಳಿಯುವುದು
ಕ್ಷಿತಿಯ ಪೂಜ್ಯತೆ ಕೆಡಿಸುವುದು, ಮುಂದೆ
ಶತ ಜನ್ಮಂಗಳಿಗೆ ಹೊಣೆಯಾಗಿ ನಿಲ್ಲುವುದು
ಈ ಬಗೆಯ ತನು ಎಲು ನರ ಖಂಡ
ಅದರೊಳಗೆ ವಾಯುರಂಧ್ರಕಿಸಿ ಕೊಳದೊದ್ದಂಡ
ಭಗವೆಂಬುದು ಮೂತ್ರದಭಾಂಡ, ಅದ
ವಗಡಿಸದೆ ನಿಜಸುಖವಿಲ್ಲ ಕಂಡ್ಯ
ವಶವಾದ ವಾಲಿಯ ಕೊಲ್ಲಿಸಿಹುದು, ಹೀಗೆ
ಹೆಸರು ಮಾತ್ರದಿ ದಶಕಂಠನ್ನಳಿಸಿಹುದು
ಶಚಿಪತಿಯಂಗದಿ ಭಗಾಕ್ಷಯ ಎಸೆದಿಹುದು, ಹೀಗೆ
ಹೆಸರು ಮಾತ್ರದಿ ಕೀಚಕನಳಿಸಿಹುದು
ಪಶುಪತಿ ದೆಸೆಗೆಡಿಸಿಹುದು, ಹೀಗೆ
ವಸುಧೆಯೊಳು ಜೀವರ ಹಸಗೆಡಿಸುವುದು
ವಸುಧೇಶನ ನಾಮ ಮರೆಸುವುದು, ನಮ್ಮ
ಅಸಮ ಪುರಂದರವಿಠಲನ ತೊರೆದು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments