ಹರಿಯೆನ್ನು, ಹರಿಯೆನ್ನು...

ಹರಿಯೆನ್ನು, ಹರಿಯೆನ್ನು...

ರಾಗ ಕಾಪಿ/ಅಟ್ಟ ತಾಳ ಹರಿಯೆನ್ನು, ಹರಿಯೆನ್ನು, ಹರಿಯೆನ್ನು ಪ್ರಾಣಿ || ಪಲ್ಲವಿ || ಹರಿಯೆನ್ನದಿದ್ದರೆ ನರಹರಿಯಾಣಿ || ಅನು ಪಲ್ಲವಿ || ಹೆಂಡಿರು ಮಕ್ಕಳು ಹೆರವರು ಪ್ರಾಣಿ ಕೊಂಡು ಹೋಗುವಾಗ ಒಬ್ಬರ ಕಾಣಿ || ೧ || ದಾನವಿಲ್ಲದೆ ದ್ರವ್ಯ ಗಳಿಸಿದೆ ಪ್ರಾಣಿ ಪ್ರಾಣ ಹೋಗುವಾಗ ಕಾಣಿ ದುಗ್ಗಾಣಿ || ೨ || ನೀರಮೇಲಿನ ಗುಳ್ಳೆ ಸಂಸಾರ ಪ್ರಾಣಿ ಪುರಂದರವಿಠಲ ಸಾರಿದ ಪ್ರಾಣಿ || ೩ || ~~~~ * ~~~~ [ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು