ಹರಿಯೆಂಬ ನಾಮಾಮೃತದ ಸುರುಚಿಯು

ಹರಿಯೆಂಬ ನಾಮಾಮೃತದ ಸುರುಚಿಯು

(ರಾಗ ಆರಭಿ. ಅಟ ತಾಳ ) ಹರಿಯೆಂಬ ನಾಮಾಮೃತದ ಸುರುಚಿಯು ಪರಮ ಭಕ್ತರಿಗಲ್ಲದೆ ಅರಿಯದ ಕಡು ಮೂರ್ಖ ಜನರಿಗೆ ಪೇಳಲು ಹರುಷವಾಗಬಲ್ಲುದೆ ಅಂದುಗೆ ಅರಳೆಲೆ ಇಟ್ಟರೆ ಕೊಡಗ ಕಂದನಾಗ ಬಲ್ಲುದೆ ಹಂದಿಗೆ ತುಪ್ಪ ಸಕ್ಕರೆ ಉಣಿಸಲು ಗಜೇಂದ್ರನಾಗ ಬಲ್ಲುದೆ ಚಂದಿರನ ಪೂರ್ಣಕಳೆಯನು ತೋರಲು ಅಂಧ ನೋಡಬಲ್ಲನೆ ಇಂದಿರೇಶನ ಸವಿನಾಮದ ರುಚಿಗಳ ಮಂದಜ್ಞಾನಿ ಬಲ್ಲನೆ ಉರಗಕೆ ಕ್ಷೀರವ ಉಣಿಸಲು ಅಧರ ಗರಳ ಪೋಗಲು ಬಲ್ಲುದೆ ಭರದಿಂದ ಶ್ವಾನನ ಬಾಲವ ಎಳೆಯಲು ಸರಳವಾಗಬಲ್ಲುದೆ ಭರದಿಂದ ನೀಲಿಯ ಕರದಲಿ ತೊಳೆಯಲು ಕರಿದು ಪೋಗಬಲ್ಲುದೆ ಪರಿಪರಿ ಬಂಗಾರ ಇಟ್ಟರೆ ದಾಸಿಯು ಅರಸಿಯಾಗಬಲ್ಲಳೆ ಮೋಡಕ್ಕೆ ಮಯೂರ ಕುಣಿವಂತೆ ಕುಕ್ಕುಟ ನೋಡಿ ಕುಣಿಯಬಲ್ಲುದೆ ಗೊಡೆಗೆ ಇದಿರಾಗಿ ನಾಟ್ಯವನಾಡಲು ನೋಡಿ ಸುಖಿಸಬಲ್ಲುದೆ ಹಾಡಿದ ಕುಶಲವ ಬಧಿರನು ಕೇಳಿ ಹರುಷಪಡಲು ಬಲ್ಲನೆ ರೂಢಿಗೊಡೆಯ ನಮ್ಮ ಪುರಂದರವಿಠಲನ್ನ ಮೂಢಜ್ಞಾನಿ ಬಲ್ಲನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು