ಹನುಮ ನಮ್ಮ ತಾಯಿ

ಹನುಮ ನಮ್ಮ ತಾಯಿ

(ರಾಗ: ಮೋಹನ. ಅಟ ತಾಳ) ಹನುಮ ನಮ್ಮ ತಾಯಿತಂದೆ ಭೀಮ ನಮ್ಮ ಬಂಧು ಬಳಗ ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||ಪ|| ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ ಆಯಾಸವಿಲ್ಲದೆ ಸಂಜೀವನವ ತಂದೆ ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ ರಘು ರಾಯನಂಘ್ರಿಗಳೆ ಸಾಕ್ಷಿ ತ್ರೇತಾ ಯುಗದಿ || ಬಂಧುಬಳಗದಂತೆ ಆಪದ್ಬಾಂಧವನಾಗಿ ಪಾರ್ಥನಿಗೆ ಬಂದ ದುರಿತಗಳ ಪರಿಹರಿಸಿ ಅಂಧಕ ಜಾತರ ಕೊಂದು ನಂದ ಕಂದಾರ್ಪಣೆಂದ ಗೋ- ವಿಂದನಂಘ್ರಿಗಳೆ ಸಾಕ್ಶಿ ದ್ವಾಪರ ಯುಗದಿ || ಗತಿ ಗೋತ್ರರಂತೆ ಸಾಧುಯತಿಗಳಿಗೆ ಮತಿಯ ತೋರಿ ಮತಿ ಕೆಟ್ಟ ಇಪ್ಪತ್ತಒಂದು ಮತವ ಖಂಡಿಸಿ ಗತಿಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮ ಗತಿ ಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು