ಸದ್ದು ಮಾಡಲು ಬ್ಯಾಡವೋ
(ಕಲ್ಯಾಣಿ ರಾಗ ಅಟ್ಟತಾಳ)
ಸದ್ದು ಮಾಡಲು ಬ್ಯಾಡವೋ , ನಿನ್ನ ಕಾಲಿಗೆ
ಬಿದ್ದು ನಾ ಬೇಡಿಕೊಂಬೆ ||ಪ||
ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ-
ದಿದ್ದದ್ದು ಕಂಡರೇನೆಂಬುವರೊ ರಂಗ ||ಅ.ಪ||
ಬಳೆ ಘಲ್ಲುಕೆನ್ನದೇನೊ , ಕೈಯ ಪಿಡಿದು
ಎಳೆಯದಿರೊ ಸುಮ್ಮನೆ
ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-
ರಳ ಪದಕಂಗಳು ಧ್ವನಿಗೆಯ್ಯುವುವೊ ರಂಗ ||೧||
ನಿರುಗೆಯ ಪಿಡಿಯದಿರೊ , ಕಾಂಚಿಯ ದಾಮ
ಕಿರುಗಂಟೆ ಧ್ವನಿಗೆಯ್ಯದೆ
ಕಿರುದುಟಿಗಳ ನೀನು ಸವಿದು ಚಪ್ಪರಿಸಲು
ತರವಲ್ಲ ಗಂಡ ಮತ್ಸರವ ತಾಳುವನಲ್ಲ ||೨||
ನಾಡಮಾತುಗಳೇತಕೊ-ಸಂಗೀತವ
ಪಾಡುವ ಸಮಯವೇನೊ
ಗಾಡಿಕಾರ ಶ್ರೀರಂಗವಿಠಲನೆ
ಪಾಡುಪಂಥಗಳೊಡಗೂಡುವ ಸಮಯದಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments