ವ್ಯರ್ಥವಲ್ಲವೆ ಜನುಮ

ವ್ಯರ್ಥವಲ್ಲವೆ ಜನುಮ

( ರಾಗ ಪೂರ್ವಿ ಆದಿತಾಳ) ವ್ಯರ್ಥವಲ್ಲವೆ ಜನುಮ ವ್ಯರ್ಥವಲ್ಲವೇ ||ಪ|| ತೀರ್ಥಪದನ ಭಜಿಸಿ ಕೃತಾರ್ಥನಾಗದವನ ಜನುಮ ||ಅ|| ಮುಗುಳುನಗೆ ಎಳೆತುಳಸಿದಳಗಳನು ಬಲು ಪ್ರೇಮದಿಂದ ಜಗನ್ಮಯಗರ್ಪಿಸಿ ಕೈಯ ಮುಗಿದು ಸ್ತುತಿಸದವನ ಜನುಮ || ಸ್ನಾನ ಸಂಧ್ಯಾನದಿಂದ ಮೌನಮಂತ್ರ ಜಪಗಳಿಂದ ಧ್ಯಾನದಿಂದ ತಂತ್ರಸಾರ ಹೀನನಾದವನ ಜನುಮ || ಶೋಡಷೋಪಚಾರದಿಂದ ನೋಡಿ ರಂಗನ ಪೂಜೆ ಮಾಡಿ ಕೂಡಿ ಭಜಿಸಿ ಕುಣಿದು ಕೊಂಡಾಡಿ ಪಾಡದವನ ಜನುಮ || ಭೋಗಿಶಯನನ ದಿನದಿ ವಿಹಿತ ಭೋಗಂಗಳನೆ ತೊರೆದು ಪರಮ ಭಾಗವತರ ಮೇಳದೊಳಗೆ ಜಾಗರದಿಂದಿರದವನ || ದಾಸರೊಡನೆ ಆಡದವನ ದಾಸರ ಕೂಡೆ ಪಾಡದವನ ದಾಸರ ಕೊಂಡಾಡದವನ ದಾಸತ್ವ ಪೊಂದದವನ || ಹರಿಯ ಗುಣವೆಣಿಸದವನ ಹರಿಯ ಸ್ಮರಣೆಯಿಲ್ಲದವನ ಹರಿಯ ಕೊಂಡಾಡದವನ ಹರಿಯ ನಂಬದವನ ಜನುಮ || ನಗುವರೆಂಬ ಭಾವವಡಗಿ ಜಿಗಿದು ಕುಣಿದು ಮೈಯು ಪುಳಕಿ ಬಿಗಿದು ಪರವಶತ್ವದಿಂದ ಪೊಗಳಿ ನಲಿಯದವನ ಜನುಮ || ಸರ್ವಧರ್ಮ ಸರ್ವಯಜ್ಞ ಸರ್ವತೀರ್ಥಯಾತ್ರೆಗಳನು ಸರ್ವದಾನ ವಸ್ತ್ರಗಳನ್ನು ಸರ್ವ ವರ್ತಿಸದವನ ಜನುಮ || ಭಂಗುರವಾದಂಥ ದೇಹ ಮಂಗಳಾತ್ಮಕನಾದ ಶ್ರೀ- ರಂಗಪುರಂದರವಿಠಲ ಪಶ್ಚಿಮ ರಂಗಗರ್ಪಿಸದವನ ಜನುಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು