ವೇಂಕಟಾಚಲನಿಲಯಂ
ರಾಗ ಸಿಂಧು ಭೈರವಿ/ತಾಳ ಆದಿ
ವೇಂಕಟಾಚಲನಿಲಯಂ ವೈಕುಂಠಪುರವಾಸಂ
ಪಂಕಜನೇತ್ರಂ ಪರಮಪವಿತ್ರಂ
ಶಂಖಚಕ್ರಧರಂ ಚಿನ್ಮಯರೂಪಂ || ಪಲ್ಲವಿ ||
ಅಂಬುಜೋಧ್ಭವ ವಿನುತಂ
ಅಗಣಿತಗುಣನಾಮಂ
ತುಂಬುರುನಾರದ ಗಾನವಿಲೋಲಂ
ಅಂಬುಧಿಶಯನಂ ಆತ್ಮಾಭಿರಾಮಂ || ೧ ||
ನೌಮಿ ಪಾಂಡವ ಪಕ್ಷಂ
ಕೌರವಮದಹರಣಂ
ಬಾಹು ಪರಾಕ್ರಮಪೂರ್ಣಂ
ಅಹಲ್ಯಾಶಾಪ ಭಯನಿವಾರಣಂ || ೨ ||
ಸಕಲ ವೇದ ವಿಚಾರಂ ಸರ್ವಜೀವ ನಿಕರಂ
ಮಕರಕುಂಡಲಧರ ಮದನಗೋಪಾಲಂ
ಭಕ್ತ ಪೋಷಕ ಶ್ರೀಪುರಂದರವಿಠಲಂ || ೩ ||
~~~~ * ~~~~
[ಇದೊಂದು ಸಂಸ್ಕೃತ ಕೃತಿ.]
ಚಿನ್ಮಯರೂಪಂ - ಕೇವಲ ಚೈತನ್ಯವೇ ಸ್ವರೂಪವಾಗಿ ಉಳ್ಳವನು.
ಆತ್ಮಾಭಿರಾಮಂ - ತನ್ನಲ್ಲೇ ತಾನು ಸುಖವನ್ನು ಹೊಂದಿದವನು; ಆಪ್ತಕಾಮ. ನಿತ್ಯ ತೃಪ್ತ, ಪರಿಪೂರ್ಣ.
ಪಾಂಡವ ಪಕ್ಷಂ - ಕೃಷ್ಣಾವತರದಲ್ಲಿ.
ಅಹಲ್ಯಾಶಾಪ - ರಾಮಾವತಾರದಲ್ಲಿ.
ಸಕಲವೇದ ವಿಚಾರಂ - ಎಲ್ಲ ಶೃತಿಗಳೂ ಅವನನ್ನೇ ಕುರಿತವು.
ಸರ್ವಜೀವ ನಿಕರಂ - ಎಲ್ಲ ಜೀವರಿಗೂ ಆಶ್ರಯಭೂತನಾದವನು.
[ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments