ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರ್ಯಾರಮ್ಮ ...

ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರ್ಯಾರಮ್ಮ ...

ಆರಭಿ - ಆದಿತಾಳ ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರ್ಯಾರಮ್ಮ |ಪ| ಸುಮಾಸ್ತ್ರನಯ್ಯನೆದೆ ಮೇಲೆ ಸತತ ಬ ಹುಮಾನದಲಿ ಮೆರೆವ ಮಹಾಮಹಿಮಳೇ |ಅ| ಕನಕ ಮುಕುಟ ಮಂಡಿತ ಕುಟಲಾಳಕಜಾಲೇ | ಶ್ರೀ ಚಂ ದನ ಕುಂಕುಮ ಕಸ್ತುರಿ ತಿಲಕಾಂಕಿತ ಫಾಲೇ| ಮಣಿಮಯ ಕುಂಡಲ ಶೋಭಿತ ಕರ್ಣಕಪೋಲೇ| ಚಂಪಕ ನನೆ ನಾಸಾಗ್ರದೊಳೂಗುವ ಮೌಕ್ತಿಕ ಲೋಲೇ ಮಿನುಗುವ ಮಾಣಿಕದ ಮಣಿಯಧರ ಪುಟದೊ ಳಿನಿವರ ವಜ್ರದಿ ಕಣಿಗಳ ರಾಜಿ ದ ಶನಯುತ ಸ್ಮೇರಾನನನ ಶುಭಕಾಂತಿಯಿಂ ವನಜ ಭವನ ಮನೆಗೆ ಮಂಗಳಗರೆವ |೧| ಕೊರಳೊಳು ಪರಿಮಳ ಪರಿಪರಿ ಪುಷ್ಪದ ಮಾಲೇ | ಒಪ್ಪುವ ಕರಿರಾಜನ ಕರದಿರುವಿಕೆ ಕರಗಳ ಲೀಲೇ|| ಶರಣಗತ ಜನ ಪರಿಪಾಲನರತ ಶೀಲೇ | ಗಂಡನ | ಪರಿರಂಭಣ ಸಾಮ್ರಾಜ್ಯದ ಸುಖದನುಕೂಲೇ|| ಕರುಣಿಸಮ್ಮ ತವ ಕರುಣ ಕಟಾಕ್ಷದ ಶಿರಿಯ ಬೆಳಗಿನೊಳ್ ಪರಿಚರಿಸುವ ಸುಜ ನರ ಚರಣಾಂಬುಜ ಪರಿಮಳದೊಳು ಮನ ವೆರಗಿಸುವದು ಸೌಂದರ್ಯ ಶಿಖಾಮಣಿ ರಮಣೀಯ ವಿಮಲ ಕಮಲಾಯತದಳನೇತ್ರೇ | ಚಂಪಕ | ಸುಮದ ಸುವರ್ಣ ಪರಿಮಳದ ಸುಂದರಗಾತ್ರೇ ಕಮಲ ಭವೇಂದ್ರಾದ್ಯಮರ ಮುನಿಗಣಸ್ತೋತ್ರೇ | ಶ್ರೀ ಕಮಲೇಶ ವಿಠಲರಾಯನ ಕರುಣಕೆ ಪಾತ್ರೇ ಭ್ರಮಿಸುವೆನು ಭವದ ತಿಮಿರದೊಳಗಹಂ ಮಮ ಮದದಿಂದಲಿ ಸುಮಾರ್ಗವರಿಯದೆ ವಿಮಲದೃಷ್ಟಿ ಚಂದ್ರಮನಮೃತ ಕಿರಣ ನಮಗೆ ಸಲಿಸೆ ಮಾರಮಣೆ ಮಜ್ಜನನಿ (ಬೇಲೂರು ಕೇಶವದಾಸರ ಕರ್ನಾಟಕ ಭಕ್ತ ವಿಜಯದಿಂದ)
ದಾಸ ಸಾಹಿತ್ಯ ಪ್ರಕಾರ