ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ

ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ

(ಭೈರವಿ ರಾಗ ತ್ರಿತಾಳ) ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ||ಧ್ರುವ|| ಮಾಯಾಮೋಹದೊಳು ಸಿಲ್ಕಿ ದೇಹ ಭ್ರಮೆಯಗೊಂಡು ಕಾಯಸೌಖ್ಯಕೆ ಬಾಯಿದೆರಿಯಬ್ಯಾಡವೋ ||೧|| ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಬಣ್ಣ ಪರಿಯಲಿನ್ನು ಕಣ್ಣುಗೆಟ್ಟು ಕುರುದನಂತೆ ದಣಿಯಬ್ಯಾಡವೋ ||೨|| ನಾನು ನೀನು ಎಂಬ ಭಾವ ಮಹಿಪತಿಗಳೆದು ಭಾನುಕೋಟಿ ತೇಜನಂಘ್ರಿ ಬೆರೆದು ಮನಕೂಡವೊ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು