ಮಾನವ ಜನ್ಮ ದೊಡ್ಡದು

ಮಾನವ ಜನ್ಮ ದೊಡ್ಡದು

(ರಾಗ ರೇಗುಪ್ತಿ. ಅಟ ತಾಳ) ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ||ಪ|| ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಹುಚ್ಚರಾಗುವರೆ ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ ಉಣ್ಣದೆ ಉಪವಾಸ ಇರುವರೆ ಖೋಡಿ || ಕಾಲನ ದೂತರು ಕಾಲ್ ಪಿಡಿದೆಳೆವಾಗ ತಾಳು ತಾಳೆಂದರೆ ತಾಳುವರೆ ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೊ ಹಾಳು ಸಂಸಾರ ಸುಳಿಗೆ ಸಿಕ್ಕಲು ಬೇಡಿ || ಏನು ಕಾರಣ ಯದುಪತಿಯನು ಮರೆತಿರಿ ಧನ ಧಾನ್ಯ ಪುತ್ರರು ಕಾಯುವರೆ ಇನ್ನಾದರು ಏಕೋಭಾವದಿ ಭಜಿಸಿರೊ ಚೆನ್ನ ಶ್ರೀ ಪುರಂದರ ವಿಟ್ಠಲ ರಾಯನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು