ಮಹದಾದಿ ದೇವ ನಮೋ

ಮಹದಾದಿ ದೇವ ನಮೋ

(ರಾಗ ನಾಟ. ತ್ರಿಪುಟ ತಾಳ). ಮಹದಾದಿ ದೇವ ನಮೋ ||ಪ|| ಮಹದಾದಿ ದೇವ ನಮೋ ಮಹಾ ಮಹನೀಯ ನಮೋ ಪ್ರಹ್ಲಾದ ವರದ ಅಹೋಬಲ ನಾರಸಿಂಹ ||ಅ.ಪ|| ಧರಣಿಗುಬ್ಬಸವಾಗೆ ತಾರಾಪಥವು ನಡುಗೆ ಸುರರು ಕಂಗೆಟ್ಟೊಡೆ ನಭವ ಬಿಟ್ಟು ತುರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆ ಉರಿಯನುಗುಳುತ ಉದ್ಭವಿಸಿದೆ ನಾರಸಿಂಹ || ಸಿಡಿಲಂತೆ ಗರ್ಜಿಸುತ ಕುಡಿಯ ನಾಲಿಗೆ ಚಾಚಿ ಅಡಿಗಡಿಗೆ ಲಂಘಿಸುತ ಕಡು ಕೋಪದಿಂದ ಮುಡಿವಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ ಕಡು ಉದರ ಬಗಿದೆ ನಾರಸಿಂಹ || ಸರಸಿಜೋದ್ಭವ ಪುರಂದರಾದಿ ಸಮಸ್ತ ಸುರರು ಅಂಬರದಿ ಪೂಮಳೆಗರೆಯೆ ಸಿರಿ ಸಹಿತ ಗರುಡಾದ್ರಿಯಲಿ ನಿಂತು ಭಕುತರನು ಕರುಣಿಸಿದೆ ಪುರಂದರಾವಿಠಲ ನಾರಸಿಂಹ ||
ದಾಸ ಸಾಹಿತ್ಯ ಪ್ರಕಾರ
ಬರೆದವರು