ಮರೆಯದಿರು ಹರಿಯ
(ರಾಗ ಸುರುಟಿ ಆದಿ ತಾಳ )
ಮರೆಯದಿರು ಹರಿಯ, ಮರೆವರೆ
ಮೂರು ಲೋಕದ ದೊರೆಯ ||
ಮದಗಜ ಹರಿಯೆಂದು ಒದರಲು , ಒದಗಿದ ಕ್ಷಣದಿ ಬಂದು
ಮುದದಿ ನಕ್ರನ ಕೊಂದು ಸಲಹಿದ , ಸದ್ಭಕ್ತರ ಬಂಧು
ಮೃದುಲ ಪ್ರಹ್ಲಾದನ ಬೆದರಿಸಿದಸುರನ
ಉದರವ ಬಗಿದಂಥ ಅದ್ಭುತ ಮಹಿಮನ ||
ನಾರಿ ತನ್ನ ಕರೆದ ಮಾತ್ರದಿ, ಸೀರೆಯ ಮಳೆಗರೆದ
ಘೋರ ಶಾಪದಿ ಬಿದ್ದ ಸ್ತ್ರೀಯುದ್ಧಾರ ದಯದಿ ಮಾಡ್ದ
ಜಾರ ಅಜಾಮಿಳನ ನಾರಾಯಣನೆನೆ
ಪಾರುಗಾಣಿಸಿದಪಾರಮಹಿಮನ ||
ಒಂದು ಬಾರಿ ಶ್ರೀಶಾ ಎಂದರೆ, ಬಂದ ದುರಿತ ನಾಶ
ಬೆಂದವು ಭವಪಾಶ, ಅವರಿಗೆ ಎಂದಿಗಿಲ್ಲವೊ ಕ್ಲೇಶ
ಇಂದಿರೆರಮಣ ಶ್ರೀಪುರಂದರವಿಠಲನ
ಎಂದಿಗೆ ನೆನೆವರೊ ಅಂದಿಗೆ ಧನ್ಯರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments