ಮಧ್ವರಾಯರ ನೆನೆದು

ಮಧ್ವರಾಯರ ನೆನೆದು

(ರಾಗ ಭೂಪಾಳಿ. ಆದಿತಾಳ) ಮಧ್ವರಾಯರ ನೆನೆದು ಪರಿಶುದ್ಧರಾಗೈರೋ ||ಪ|| ಪೊದ್ದಿ ವೈಷ್ಣವ ಮತ ಭವಾಬ್ಧಿಯನು ದಾಟಿರೋ ||ಅ.ಪ|| ಉದಯದಲ್ಲಿ ಏಳುವಾಗ ಮುದದಿ ಸ್ನಾನ ಮಾಡುವಾಗ ಒದಗಿ ನಿತ್ಯ ಕರ್ಮಗಳನು ನಡೆಸುವಾಗ ಹೃದಯದಲಿ ಬೀಜಾಕ್ಷರ ಮಂತ್ರ ಜಪಿಸುವಾಗ ಸದಮಲಾನಂದ ಹನುಮನ್ನ ನೆನೆಯಿರೋ || ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವವಿಡುವಾಗ ಪ್ರೇಮದಿ ವೈಷ್ಣವೊತ್ತಮರು ಅರ್ಚಿಸುವಾಗ ಆ ಮಹಾ ಭಕ್ಷ್ಯ ಭೋಜ್ಯ ಆರೋಗಣೆ ಮಾಡುವಾಗ ನೇಮದಿಂದ ಕೌರವಾಂತಕ ಭೀಮರಾಯನ ನೆನೆಯಿರೋ || ಕರಗಳನ್ನು ತೊಳೆದು ತೀರ್ಥ ತುಳಸೀದಳವೀಯುವಾಗ ಪರಿಪರಿಯ ಫಲ ಪುಷ್ಪ ವೀಳ್ಯ ಅರ್ಪಿಸುವಾಗ ಸರ್ವಾಂತರ್ಯಾಮಿ ನಮ್ಮ ಪರಮಗುರು ಮಧ್ವಾಂತರಾತ್ಮಕ ಪುರಂದರ ವಿಠಲಗೆ ಸಮರ್ಪಣ ಮಾಡಿರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು