ಮಧ್ವಮತದ ಸಿದ್ಧಾಂತ

ಮಧ್ವಮತದ ಸಿದ್ಧಾಂತ

( ರಾಗಾ ಪೂರ್ವಿ. ಆದಿ ತಾಳ) ಮಧ್ವ ಮತದ ಸಿದ್ಧಾಂತದ ಪದ್ಧತಿ ಬಿಡಬೇಡ ಬಿಡಬೇಡ ಬಿಟ್ಟು ಕೆಡಬೇಡ ಕೆಡಬೇಡ ||ಪ|| ಬಿಟ್ಟರೆ ಯಮ ಬೆನ್ನೆಟ್ಟುವ ಮೂಢ ||ಅ.ಪ|| ಹರಿ ಸರ್ವೋತ್ತಮನಹುದೆಂಬ ಜ್ಞಾನವ- ನರಿತು ಬಾಳ್ವುದಕೆ ಪರತರವಾದ ಮತ || ಘೋರ ಯಮನ ಭಯ ದೂರ ಓಡಿಸಿ ಮು- ರಾರಿಯ ಚರಣವ ಸೇರೋ ಸನ್ಮಾರ್ಗವ || ಭಾರತೀಶ ಮುಖ್ಯ ಪ್ರಾಣಾಂತರ್ಗತ ನೀರಜಾಕ್ಷ ಪುರಂದರ ವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು