ಮಡಿ ಮಡಿ ಮಡಿಯೆಂದು ಮೂರ್ಮಾರು

ಮಡಿ ಮಡಿ ಮಡಿಯೆಂದು ಮೂರ್ಮಾರು

( ರಾಗ ನಾದನಾಮಕ್ರಿಯ. ಆದಿ ತಾಳ) ಮಡಿ ಮಡಿ ಮಡಿಯೆಂದು ಮಾರ್ಮಾರು ಹಾರುತಿ ಮಡಿಯೆಲ್ಲಿ ಬಂತೆ ಬಿಕನಾಸಿ||ಪ|| ಮಡಿಯು ನೀನೆ ಮೈಲಿಗೆ ನೀನೆ ಸುಡಲಿ ನಿನ್ನ ಮಡಿ ಬಿಕನಾಸಿ||ಅ.ಪ|| ಎಲುವು ಚರ್ಮ ಮಲಮೂತ್ರ ಗುಂಡಿಲಿ ನಲಿವುತ ನಿಂತೆಯ ಬಿಕನಾಸಿ ನೆಲೆ ಗೊಂಡ ನವ ದ್ವಾರದ ಹೊಲೆಯೊಳು ನರಳುತ ನೀ ಬಿದ್ದೆ ಬಿಕನಾಸಿ || ಹುಟ್ಟುತ ಸೂತಕ ಸಾಯಲು ಸೂತಕ ನಟ್ಟ ನಡುವೆಲ್ಲಿ ಬಂತೆ ಬಿಕನಾಸಿ ಪಟ್ಟಣ ಕಾವೇರಿಲಿ ಮುಳುಗಲು ನಿನ್ನ ಮುಟ್ಟು ಹೋದೀತೆ ಬಿಕನಾಸಿ || ಚರ್ಮವ ತೊಳೆದರೆ ಕರ್ಮವು ಹೋಗ್ವುದೆ ಮರ್ಮವ ತಿಳಿಯದೆ ಬಿಕನಾಸಿ ಬೊಮ್ಮನಯ್ಯ ಪುರಂದರ ವಿಠಲನ ಪಾಡಿ ನಿರ್ಮಲದಿ ಬಾಳೆ ಬಿಕನಾಸಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು