ಮಕ್ಕಳ ಮಾಣಿಕವೆ

ಮಕ್ಕಳ ಮಾಣಿಕವೆ

(ರಾಗ ಮುಖಾರಿ. ಅಟ ತಾಳ) ಮಕ್ಕಳ ಮಾಣಿಕವೆ ಮನೋಹರ ನಿಧಿಯೆ ವೈರಿ- ರಕ್ಕಸ ಶಕಟನ ತುಳಿದುದೀ ಪಾದವೆ ||ಪ|| ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ಜಲಧಿಯ ಪಡೇದದ್ದೀ ಪಾದವೆ ಕೃಷ್ಣ ಹಲವು ಕಾಲಗಳಿಂದ ಶಿಲೆ ಶಾಪ ಪಡೆದಿರಲು ಫಲಕಾಲಕ್ಕೊದಗಿದ್ದುದೀ ಪಾದವೆ ಕೃಷ್ಣ || ಕಡು ಕೋಪದಿಂದ ಕಾಳಿಂಗನ ಮಡುವ ಕಲಕಿ ಹೆಡೆಯನ್ನು ತುಳಿದದ್ದೀ ಪಾದವೆ ಕೃಷ್ಣ ಸಡಗರದಿ ಕೌರವನ ಸಿಂಹಾಸನವನು ಹೊಡೆಮಗುಚಿ ಕೆಡಹಿದ್ದೀ ಪಾದವೆ ಕೃಷ್ಣ || ಶೃಂಗಾರದಿಂದಾರು ಹೆಂಗಳ ಸಹಿತ ಶ್ರೀ- ಅಂಗನೆಯೊತ್ತುವದೀ ಪಾದವೆ ಕೃಷ್ಣ ಸಂಗ ಸುಖದಿ ಶ್ರೀ ಪುರಂದರವಿಠಲನೆ ಅಂಗದೊಳಗಡಗಿದ್ದುದೀ ಪಾದವೆ ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು