ಭಾರಿಗೆ ನಿನ್ನ ಬಾಳ್ವೆ ದಾರಿಗೆ

ಭಾರಿಗೆ ನಿನ್ನ ಬಾಳ್ವೆ ದಾರಿಗೆ

( ರಾಗ ಪಂತುವರಾಳಿ/ಕಾಮವರ್ಧನಿ ಅಟ ತಾಳ) ಭಾರಿಗೆ ನಿನ್ನ ಬಾಳ್ವೆ ದಾರಿಗೆ ||ಪ|| ಬರುತೇನು ತಂದೆ ಬರಿಗೈಲಿ ಬಂದೆ ಪರನಿಂದೆಗಳ ಕಟ್ಟಿ ಹರಕೊಂಡೇನೆಂದೆ || ಇರು ಎಲೊ ಶಾಂತಿ ಈಡ್ಯಾಡೊ ಭ್ರಾಂತಿ ಮೂರು ದಿನದ ಸಂತೆ ನಿನಗ್ಯಾಕೊ ಚಿಂತೆ || ಅನುಗಾಲ ಕಿಚ್ಚು ಭವದೊಳಗ್ಹಚ್ಚು ಅನುಭವದಚ್ಚು ಸವಿನೋಡೋ ಹುಚ್ಚು || ಶ್ರೀ ಕೃಷ್ಣಧ್ಯಾನ ಮರೆಯದಿರಲಿ ಶ್ವಾನ ಪರಿಪರಿ ದಿನದಲ್ಲಿ ತಿಳಿಯೋ ನೀ ಜ್ಞಾನ || ಸಿರಿವರ ಕೃಷ್ಣ ಭವಭಯ ಭಂಗ ಪುರಂದರವಿಠಲನ್ನ ಒಲಿಸಿಕೊ ಮಂಗ, ಮುದಿಮಂಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು