ಬೈಲಾ ಬಾವಿಗೆ ಬಂದಳೋರ್ವ ಬಾಲೆ
(ರಾಗ ಮೋಹನ ಛಾಪುತಾಳ)
ಬೈಲಾ ಬಾವಿಗೆ ಬಂದಳೋರ್ವ ಬಾಲೆ ||ಪ||
ಕಾಲು ಜಾರಿತು
ಕೊಡ ಒಡೆಯಿತು
ನೀರುರುಳಿತು || ಅ.ಪ||
ನೆರಳಿಲ್ಲದೆ ನೀರಿಲ್ಲದೆ ಬೇರಿಲ್ಲದೆ ಸಸಿ ಹುಟ್ಟಿ
ಹೂವಿಲ್ಲದೆ ಕಾಯಿಲ್ಲದೆ ಫಲ ಬಂದಿತು
ಕರವಿಲ್ಲದೆ ಕಾಲಿಲ್ಲದೆ ಕೊಯ್ಯುವರು ಮೂವರು
ಫಲ ಉಂಬರು ಎಂಭತ್ತನಾಲ್ಕು ಲಕ್ಷದಲಿ ||
ಕುರುಡ ಕಂಡನು ಹೂವು ನಡೆದಿರುಳೆ ಬಾಹುದನು
ಮೂಕ ಕಂಡನು ಕನಸು ಕಿವುಡ ಕೇಳಿ
ಸ್ಥಿರವೆಂದು ಇರವು ದಿಟ್ಟ ಗಗನಕೆ ಹಾರಿ
ಮರವು ಮುರಿಯಿತು ನೋಡೆ, ಸರಿಯಾಗಿದ್ದಂಥ ||
ಹೆಚ್ಚಿದ ಕೊಡದವಳು ಕಂಚಿ ತೋರಣ ಕಟ್ಟಿ
ರಚ್ಚಿಗೆ ಬರಲು ನಾಲ್ವರ ಮುಂದಕೆ
ಉಚ್ಚರಿಸಲೊಶವಲ್ಲ ಕೇಳು ಸಜ್ಜನ ಸೊಲ್ಲ
ನಿಚ್ಚಭಾವಗಳ ಪುರಂದರವಿಠಲ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments