ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ
( ರಾಗ ತೋಡಿ. ಅಟ ತಾಳ)
ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ ||ಪ||
ಜಾರತನವ ಬಿಡೋ ಜಾನಕೀರಮಣನೆ
ನಾರಿಯರೆಲ್ಲರು ನವನೀತಚೋರನೆಂದು ದೂರು ಹೇಳಲಿ
ಸಾರ ಓಡಿದ ಶ್ರೀ ನೀಲಗಿರಿ ವಾಸ ||ಅ||
ಅನಿರುದ್ಧ ಜನಾರ್ಧನ ಆನಂದನಿಲಯ ಹರಿ
ಮುನಿಮೌನಿಸಹವಾಸ ಮುಚಕುಂದ ವರದ
ಘನನೀಲಮೇಘಶ್ಯಾಮ ಕಾಮಿತಾರ್ಥ ಕಮಲನಾಭ
ಸನಕಾದಿವಂದ್ಯ ಸಾಗರಶಯನ ಸಾರಸನೇತ್ರ ಶಾಶ್ವತರೂಪ ||
ಮುದ್ದು ಕೊಟ್ಟೇನು ಬಾರೋ ಮುನಿಸದೇತಕೊ ತಂದೆ
ಬುದ್ಧಿ ಕೇಳಯ್ಯ ನಮ್ಮ ಭದ್ರಾದ್ರಿ ರಮಣ
ಹದ್ದನು ಏರಿಕೊಂಡು ಅಮರರ ಕೂಡಿ ಆಡಿ
ಬುದ್ಧನಾಥನೆ ಬೆಣ್ಣೆ ಕದ್ದ ಕಳ್ಳನೆ ಕಸ್ತೂರಿರಂಗನೆ ||
ನರಹರಿ ಮಾಧವ ವಿಷ್ಣು ನಂದನಂದನೆ
ಶರಧಿಬಂಧನೆ ನಿನಗೆ ಶರಣುವ ಹೊಂದಿದೆ
ಸೇರಿದೆ ಮೇಲೆ ನಿನ್ನ ಬೆರೆದು ಅಪ್ಪಯ್ಯ ರಂಗ
ಶರಣು ಮಂದಾರ ಶೇಷಗಿರೀಶ ವರದ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments