ಪವಡಿಸು ಪರಮಾತ್ಮನೆ

ಪವಡಿಸು ಪರಮಾತ್ಮನೆ

( ರಾಗ ಶಂಕರಾಭರಣ ಅಟತಾಳ) ಪವಡಿಸು ಪರಮಾತ್ಮನೆ ನೀನು ಭವರೋಗ ವೈದ್ಯ ಭಕ್ತರ ನಿಧಿಯೆ|| ಕುಂದಣದಿ ರಚಿಸಿದ ಸೆಜ್ಜೆಮನೆಯಲ್ಲಿ ಇಂದ್ರಮಾಣಿಕಮಯ ಮಂಟಪದಿ ಚೆಂದಚೆಂದದ ಠಾಣ ದೀವಿಗೆ ಹೊಳೆಯುತ್ತ ಸಿಂಧುಶಯನ ಆನಂದದಿಂದ|| ತೂಗುಮಂಚದಿ ಹಂಸತೂಲದ ಹಾಸಿಗೆ ನಾಗಸಂಪಿಗೆ ಹೂವಿನ ಒರಗು ಸಾಗರಸುತೆ ಸಮ್ಮೇಳದಿಂದಲಿ ಅತಿ- ಭೋಗವಪಡುತ ಓಲಾಡುತಿರು || ಸದ್ದಡಗಿದು ವೇಳೆ ಗಂಟೆ ಸಾಗಿದು ಬೀಗ- ಮುದ್ರೆಗಳಾಗಿದೆ ಬಾಗಿಲಿಗೆ ತಿದ್ದಿದ ಧವಳಶಂಖಗಳ ನಾದದಿಂದ ಪದ್ಮನಾಭ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು