ಪಥ ನಡೆಯದಯ್ಯ

ಪಥ ನಡೆಯದಯ್ಯ

( ರಾಗ ಮುಖಾರಿ ಝಂಪೆ ತಾಳ) ಪಥ ನಡೆಯದಯ್ಯ ಪರಲೋಕಕೈದುವರೆ(/ ಪರಲೋಕಕೈದುವೊಡೆ ?) ||ಪ|| ಮನ್ಮಥನೆಂಬ ಕಳ್ಳ ಮಾರ್ಗವ ಕಟ್ಟಿ ಸುಲಿಯುತಿರೆ ||ಅ || ಗಿಳಿವಿಂಡು ಕೋಗಿಲೆ ವಸಂತ ಮಾರುತ ಭ್ರಮರ ಬಲವೆರಸಿ ಮದನ ಮಾರ್ಗವ ಕಟ್ಟಲು ಬಲವುಳ್ಳ ಭಟರು(/ಭಕ್ತ) ಬಲು ಸನ್ಯಾಸಿ ಯೋಗಿಗಳು ಸುಲಿಸಿಕೊಂಡರು ಕೆಲರು ಸಿಕ್ಕಿದರು ಕೆಲರು || ತನುರೋಮ ಗಿಡವೃಕ್ಷ ಥಳಥಳಿಪ ಲತೆ ಮೆರೆವ ಘನಸಿಂಹ ಖಗಮೃಗಗಳಟ್ಟಣಿಸುವ ವನಿತೆಯರ ಕಾಯಕಾಂತಾರದಲಿ ದುರ್ಗಮ ಸ್ತನಪರ್ವತದ ಕಣಿವೆಯಲಿ ಕಟ್ಟಿ ಸುಲಿಯುತಿರೆ || ಕಾಳಗದೊಳಿದಿರಿಲ್ಲ ಸುರನರೋರಗರ(/ಸುರರು ದುರ್ಜನರು) ಕ- ಟ್ಟಾಳು ಮನ್ಮಥನ ಛಲದಂಕ ಬಿರುದು ಪೇಳಲೆನ್ನಲಳವಲ್ಲ ಪುರಂದರವಿಠಲನ ( /ಬಾಡದಾದಿಕೇಶವನೊಲವಿನ ) ಆಳು ಸಂಗಡವಿದ್ದವರಗೆ ಭಯವಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು