ಪತಿತಪಾವನ ಪೂರ್ಣಕಾಮ ನೀನೇ

ಪತಿತಪಾವನ ಪೂರ್ಣಕಾಮ ನೀನೇ

---- ರಾಗ -ಪಂತುವರಾಳಿ(ಯಮನ್) ಆದಿತಾಳ(ಝಪ್) ಪತಿತಪಾವನ ಪೂರ್ಣಕಾಮ ನೀನೇ ||ಪ|| ಗತಿ ಎನಗೆ ಸಂತತ ಪರಂಧಾಮ ||ಅ.ಪ|| ಕೃಪಣ ವತ್ಸಲನೆ ಎಮ್ಮಪರಾಧಗಳ ನೋಡಿ ಕುಪಿತನಾಗುವರೇನೋ ಸುಫಲದಾಯಿ ನೃಪಗನಿರುದ್ಧ ಬಿನ್ನಪವ ಮಾಡುವೆ ನಿನಗೆ ಚಪಲರಾಗಿಹರೊ ಕಾಶ್ಯಪಿ ಸುರರನು ಕಾಯೊ ||೧|| ಮಾನ್ಯಮಾನದ ಬ್ರಹ್ಮಣ್ಯದೇವ ನೀನೆಂದು ಉನ್ನತ ಶ್ರುತಿಗಳು ಬಣ್ಣಿಸುತಿಹವು ಸನ್ನುತ ಮಹಿಮನೆ ನಿನ್ನ ಪೊಂದಿದವರ ಬನ್ನಬಡಿಪುದು ನಿನಗಿನ್ನು ಧರ್ಮವಲ್ಲ ||೨|| ಹಲವು ಮಾತುಗಳಾಡಿ ಫಲವೇನು ಬ್ರಾಹ್ಮಣಕುಲಕೆ ಮಂಗಳವೀಯೊ ಕಲುಷದೂರ ಸುಲಭದೇವೇಶ ನಿನ್ನುಳಿದು ಕಾಯ್ವರಕಾಣೆ ಬಲಿಯ ಬಾಗಿಲ ಕಾಯ್ದ ಜಗನ್ನಾಥವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು