ನೀನೇ ದಯಾಸಂಪನ್ನನೋ

ನೀನೇ ದಯಾಸಂಪನ್ನನೋ

(ರಾಗ ತೋಡಿ ಆದಿ ತಾಳ ) ನೀನೇ ದಯಾಸಂಪನ್ನನೋ, ಕಾವೇರಿರಂಗ ನೀನೇ ಬ್ರಹ್ಮಾದಿ ವಂದ್ಯನೋ ||ಪ|| ಬಂಧುಗಳೆಲ್ಲರ ಮುಂದಾ ದ್ರುಪದನ ನಂದನೆಯೆಳೆ ತಂದು ಸೀರೆಯ ಸೆಳೆವಾಗ ಬಂಧು ಕೃಷ್ಣ ಸಲಹೆಂದರೆ ಅಕ್ಷಯ- ವೆಂದು ಕಾಯ್ದ ಗೋವಿಂದನು ನೀನೇ || ನಿಂದಿತ ಕರ್ಮನೊಂದುಳಿಯದೆ ಬೇ- ಕೆಂದು ಮಾಡಿದನಂದಜಮಿಳನು ಕಂದ ನಾರಗ ಎಂದರೆ ಮುಕ್ತಿಯ ಕುಂದದೆಯಿತ್ತ ಮುಕುಂದನು ನೀನೇ || ಮತ್ತಗಜವ ನೆಗಳೊತ್ತಿ ಪಿಡಿದು, ಬಲು ಒತ್ಯಧರೋಷ್ಠವ ಮೃತ್ಯುವಿನಂತಿರೆ ಭಕ್ತರ ಸಲಹುವ ಪುರಂದರವಿಟ್ಠಲ ಹಸ್ತಿಗೊಲಿದ ಪರವಸ್ತುವು ನೀನೇ ||
ದಾಸ ಸಾಹಿತ್ಯ ಪ್ರಕಾರ
ಬರೆದವರು