ನಿನ್ನ ಸಂಕಲ್ಪಾನುಸಾರ ಮಾಡೋ

ನಿನ್ನ ಸಂಕಲ್ಪಾನುಸಾರ ಮಾಡೋ

--- ರಾಗ ಕಾಂಬೋಧಿ(ಭೂಪ್ ) ಝಂಪೆತಾಳ ನಿನ್ನ ಸಂಕಲ್ಪಾನುಸಾರ ಮಾಡೋ ಎನ್ನ ಸಾಕುವ ದೊರೆಯೆ ಮಾನ್ಯ ಮಾನದನೇ ||ಪ|| ಪಾತ್ರನೆಂದೆನಿಸೋ ಪಾಪಾತ್ಮನೆಂದೆನಿಸೋ , ಇವ ಶ್ರೋತ್ರಿಯನೆಂದೆನಿಸೋ ಬಲುಶುಂಠನೆಂದೆನಿಸೋ ಪುತ್ರ-ಮಿತ್ರಾದ್ಯರಿಂ ಬೈಸೋ , ಪೂಜೆಯ ಗೈಸೋ ಕರ್ತು ನೀ ಜಗಕೆ ಸರ್ವತ್ರವ್ಯಾಪಕ ದೇವ ||೧|| ಜನರೊಳಗೆ ನೀನಿದ್ದು ಜನ್ಮಜನ್ಮಗಳಲಿ ಗುಣಕಾಲ ಕರ್ಮ ಸ್ವಭಾವಂಗಳ ಅನುಸರಿಸಿ ಪುಣ್ಯ-ಪಾಪಂಗಳ ಮಾಡಿಸಿ ಫಲಗಳ ಉಣಿಸಿ ಮುಕ್ತರ ಮಾಡಿ ಪೊರೆವ ಕರುಣಾಳೋ ||೨|| ಯಾತಕೆಮ್ಮನು ಇನಿತು ದೂರಕನ ಮಾಡುವಿ ಧರಾತಳದೊಳನುದಿನದಿ ಮಾಯಾಪತೇ ಭೀತಿಗೊಂಬುವನಲ್ಲ ಭಯನಿವಾರಣ ಜಗ- ನ್ನಾಥವಿಠಲ ಜಯಪ್ರದನೇ ಜಗದೀಶಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು