ನಿಂದಕರಿರಬೇಕಿರಬೇಕು

ನಿಂದಕರಿರಬೇಕಿರಬೇಕು

ರಾಗ - ನಾದನಾಮಕ್ರಿಯ ತಾಳ - ಆಟ ನಿಂದಕರಿರಬೇಕಿರಬೇಕು | ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೊ ಹಾಗೆ ||ಪಲ್ಲವಿ|| ಅಂದಂದು ಮಾಡಿದ ಪಾಪವೆಂಬ ಮಲ ತಿಂದು ಹೋಗುವರಯ್ಯ ನಿಂದಕರು || ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ ಪೊಂದಿಹ ಪುಣ್ಯವನೊಯ್ಯುವರಯ್ಯ ||೧|| ದುಷ್ಟ ಜನರು ಈ ಸೃಷ್ಟಿಯೊಳಿದ್ದರೆ ಶಿಷ್ಟ ಜನರಿಗೆಲ್ಲ ಕೀರ್ತಿಗಳು || ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು ಇಷ್ಟೇ ವರವನು ಬೇಡುವೆನಯ್ಯ ||೨|| ದುರುಳ ಜನಂಗಳು ಚಿರಕಾಲವಿರುವಂತೆ ಕರವ ಮುಗಿದು ವರವ ಬೇಡುವೆನು || ಪರಿಪರಿ ತಮಸಿಗೆ ಗುರಿಯಾಹರಲ್ಲದೆ ಪರಮ ದಯಾನಿಧೆ ಪುರಂದರವಿಠಲ ||೩|| *********************
ದಾಸ ಸಾಹಿತ್ಯ ಪ್ರಕಾರ
ಬರೆದವರು