ನಾ ನಿನ್ನ ಮನೆಕೆ ಬಾರೆನೆ

ನಾ ನಿನ್ನ ಮನೆಕೆ ಬಾರೆನೆ

(ರಾಗ ಸುರುಟಿ ಆದಿ ತಾಳ ) ನಾ ನಿನ್ನ ಮನೆಕೆ ಬಾರೆನೆ, ಜಯ ಪಾಂಡುರಂಗ ನಾ ನಿನ್ನ ಮನಕೆ ಬಾರೆನೆ ||ಪ|| ನಾ ನಿನ್ನ ಮನಕೆ ಬಾರೆನೆ, ಬಂದರೆ ಈ ಭವದ ಬಲೆಯೊಳು ಸಿಲುಕುವೆನೆ ||ಅ|| ಕೆಟ್ಟ ಕಿರಾತನ ಬೆಟ್ಟವ ಸುಟ್ಟು ವಾಳ್ಮೀಕಿ ಮುನಿಯೆನಿಸಿದೆ || ಭ್ರಷ್ಟಜಾಮಿಳಗಂತ್ಯಸಮಯದಲ್ಲಿ ಅಂತಕನ ಬಾಧೆಯ ಬಿಡಿಸಿದೆ || ತಂದೆ ತಾಯಿಗಳ ತೊರೆದ ಧ್ರುವನಿಗೆ ಚಂದದಿಂದ ಮಾರ್ಗವ ತೋರಿದೆ || ಪಂಕಜನಾಭನೆ ಕುಬುಜೆಡೊಂಕನೆ ತಿದ್ದಿ ಸಂಭ್ರಮದಿಂದವಳ ಕೂಡಿದೆ || ತೊತ್ತಿನ ಮಗನ ಮನೆಯ ಕುಡುತೆಪಾಲ ಸವಿದು ಮತ್ತವಗೆ ಮುಕ್ತಿಯ ತೋರಿದೆ || ಐದು ಮಂದಿಯ ಕೂಡೆ ಸರಸವೆ ದ್ರೌಪದಿಗೆ ಬಂದ ಲಜ್ಜೆಯ ಕಾಯಿದೆ || ದೀನರುದ್ಧರಿಪ ಪುರಂದರವಿಠಲ ಏನು ಕಾರಣ ಎನ್ನ ಮರೆತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು