ನಳಿನನಾಭನ ನೀನು ಪಾಡೊ

ನಳಿನನಾಭನ ನೀನು ಪಾಡೊ

(ರಾಗ ನಾದನಾಮಕ್ರಿಯ ಅಟ ತಾಳ ) ನಳಿನನಾಭನ ನೀನು ಪಾಡೊ ಬೇಗ ||ಪ || ಒಳಗಣ್ಣಿಂದ ಅವನ ಕಂಡು ನಲಿದಾಡೊ ||ಅ || ಹೃದಯ ಆಕಾಶದಲ್ಲಿರುವ ಅಲ್ಲಿ ಪದುಮಾಕ್ಷ ಪುರುಷೋತ್ತಮನೆಂಬಾತ ಆತನು ಬಹುರೂಪದಿಂದ ಕಾವ ಆಧಾರವಾಗಿಪ್ಪ ಸೂಕ್ಷ್ಮ ಪ್ರದೇಶ || ಎಂಟೊಂದು ಕದಗಳ ಮುಚ್ಚೊ ಮೇಲೆ ತಂಟೆಯಿಲ್ಲದ ಮನವ ಅವನಲಿ ಇರಿಸೊ ಕುಂಡಲಿ ಮಧ್ಯದಿ ನೋಡೊ ದಿವ್ಯ ಮಂಟಪದಲಿ ಜ್ಯೋತಿ ಥಳ ಥಳಿಸುವುದೊ || ಥಳಥಳಿಸುವ ಬಾಲಕೃಷ್ಣ ಅಲ್ಲಿ ಬಲು ಕ್ರೀಡೆಗಳನೆಲ್ಲ ಮಾಡಿಸುವನಯ್ಯ ಒಳಗೆ ಹೊರಗೆ ಪರಿಪೂರ್ಣ ನಮ್ಮ ಫುಲ್ಲಲೋಚನ ತಂದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು