ನಂಬಬೇಡಿ ನಾರಿಯರನು

ನಂಬಬೇಡಿ ನಾರಿಯರನು

(ರಾಗ ಪೂರ್ವಿ ಆದಿ ತಾಳ ) ನಂಬಬೇಡಿ ನಾರಿಯರನು ಹಂಬಲ ಹಾರೈಸಬೇಡಿ ||ಪ || ಅಂಬುಜಾಕ್ಷಿಯರೊಲುಮೆ ಡಂಭಕವೆಂದು ತಿಳಿಯಿರೊ ||ಅ || ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು, ಸನ್ನೆ ನೋಟವೆಲ್ಲ ಘನ್ನ ಘಾತಕ ಕೂಟವೆಲ್ಲ ವಂಚನೆ ಪಾಟುಗೆಟ್ಟು ಹೆಂಗಳೊಡನೆ ಕೋಟಲೆಗೊಂಡು ತಿರುಗಬೇಡಿ ನೀಟುಗಾರತಿಯರೊಲುಮೆ ಬೂಟಕವೆಂಡು ತಿಳಿಯಿರೊ || ಸೋತೆನೆಂದು ವಿಟಗೆ ದೈನ್ಯ ಮಾತನಾಡಿ ಮರುಳುಗೊಳಿಸಿ ಕಾತರವನು ಕೊಟ್ಟು ಅವನ ಮಾತಾಪಿತರ ತೊಲಗಿಸಿ ಪ್ರೀತಿಪಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ ಕೋತಿಯಂತೆ ಮಾಡಿ ಬಿಡುವ ಜಾತಿಕಾರ ಹೆಂಗಳ || ಧರಣಿಜನರು ಕೇಳಿ ಲೇಶ ಕರುಣವಿಲ್ಲ ನಾರಿಯರಿಗೆ ಎರಳೆಕಂಗಳ ಹೆಂಗಳೊಲುಮೆ ಬರೆಹ ನೀರಮೇಲಿನ ಸರಸಮುಖಿಯರಿರವ ನೀವು ಬರಿದೆ ನಂಬಿ ಕೆಡಲುಬೇಡಿ ಗುರುಪುರಂದರ ವಿಠಲರಾಯನ ಚರಣವ ನಂಬಿ ಬದುಕಿರೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು