ಧರ್ಮ ದೊರಕೊಂಬುವದೆ ಸಜ್ಜನರಿಗೆ

ಧರ್ಮ ದೊರಕೊಂಬುವದೆ ಸಜ್ಜನರಿಗೆ

( ರಾಗ ಕಲ್ಯಾಣಿ. ಅಟ ತಾಳ) ಧರ್ಮ ದೊರಕೊಂಬುವದೆ ಸಜ್ಜನರಿಗೆ ದು- ಷ್ಕರ್ಮ ಸತಿಯರುಳ್ಳ ಪುರುಷೋತ್ತಮರಿಗೆ ||ಪ|| ಧನವಿದ್ದರೇನಯ್ಯ ಮನವಿಲ್ಲದವರಿಗೆ ಮನವಿದ್ದರೇನಯ್ಯ ಧನವಿಲ್ಲವು ಧನುವೂ ಮನವೂ ಎರಡುಳ್ಳ ಪುರುಷರಿಗೆ ಅನುಕೂಲವಾದಂಥ ಸತಿಯಿಲ್ಲವಯ್ಯ || ನಿನ್ನ ಕಣ್ಣ ಮುಂದೆ ಹೋಗುವ ಜೀವನು ಇನ್ನು ನಿನಗೆ ನಾಚಿಕೆಯಿಲ್ಲವು ಎನ್ನದು ತನ್ನದು ಎಂಬ ಭ್ರಾಂತಿಯ ಬಿಟ್ಟು ಇನ್ನೀ ದೇಹವ ನಂಬಿ ಕೆಡಬೇಡ ಮನುಜ || ಈಗ ಮಾಡುವ ಧರ್ಮ ನಾಳೆಯೆಂದೆನಬೇಡ ನೀವಾರು ನಾವಾರು ಎಲೆ ಮನುಜ ಊಳಿಗದವರೆಂಬ ಭಟರು ಬಂದೆಳೆವಾಗ ನಾಳೆ ಮಾಳ್ಪೆನೆನೆ ಬಿಡುವರೆ ಮನುಜ || ಎಂದೆಂದು ಈ ಪರಿ ಅಲ್ಲಲ್ಲಿ ಬಳಲಿಕೆ ಮುಂದೆ ಕಾಣೆನು ಸಾಧನವನು ತಂದೆ ಶ್ರೀ ಪುರಂದರ ವಿಟ್ಠಲರಾಯನ ಒಂದು ಸಾರಿಯು ನೀ ನೆನೆ ಕಂಡ್ಯ ಮನುಜ ||
ದಾಸ ಸಾಹಿತ್ಯ ಪ್ರಕಾರ
ಬರೆದವರು