ಡಂಗುರವ ಸಾರಿ ಡಿಂಗರಿಗರೆಲ್ಲರು
( ರಾಗ ನಾದನಾಮಕ್ರಿಯೆ ಆದಿತಾಳ)
ಡಂಗುರವ ಸಾರಿ (ಹರಿಯ) ಡಿಂಗರಿಗರೆಲ್ಲರು, ಭೂ-
ಮಂಡಲಕ್ಕೆ ಪಾಂಡುರಂಗವಿಟ್ಠಲ ಪರದೈವವೆಂದು ||
ಒಡಲ ಝಾಗಟೆಯ ಮಾಡಿ
ನುಡಿವ ನಾಲಗೆಯ ಪಿಡಿದು
ಬಿಡದೆ ಢಣಢಣರೆಂದು
ಬಡಿದು ಚಪ್ಪಳಿಕ್ಕುತ್ತ ||
ಹರಿಯು ಮುಡಿದ ಹೂವ ಹರಿ-
ವಾಣದಲ್ಲಿ ಹೊತ್ತುಕೊಂಡು
ಹರುಷದಿಂದ ಹಾಡಿಪಾಡಿ
ಕುಣಿದು ಚಪ್ಪಳಿಕ್ಕುತ್ತ ||
ಇಂದು ಸಕಲಲೋಕಕೆ ಲಕ್ಷ್ಮೀ-
ಕಾಂತನಲ್ಲದಿಲ್ಲವೆಂದು
ಸಂತತಂ ಭಜಿಸುತ ನಿ-
ಶ್ಚಿಂತ ಪುರಂದರವಿಠಲನೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments