ಗೋವಿಂದ ಎನ್ನಿರೋ

ಗೋವಿಂದ ಎನ್ನಿರೋ

(ರಾಗ: ಪಂತುವರಾಳಿ. ಝಂಪೆ ತಾಳ) ಗೋವಿಂದ ಎನ್ನಿರೋ, ಹರಿ- ಗೋವಿಂದ ನಾಮವ ಮರೆಯದಿರೋ ||ಪ|| ತುಂಬಿರುವ ಪಟ್ಟಣಕೊಂಭತ್ತು ಬಾಗಿಲು ಸಂಭ್ರಮದರಸುಗಳೈದು ಮಂದಿ ಡಂಭಕತನದಿಂದ ಕಾಯುವ ಜೀವನ ನಂಬಿ ನೆಚ್ಚಿ ಕೆಡಬೇಡಿ ಕಾಣಿರೋ || ನೆಲೆಯು ಇಲ್ಲದ ಕಾಯವೆಲುಬಿನ ಪಂಜರವು ಒಲಿದು ಸುತ್ತಿದ ಚರ್ಮದ ಹೊದಿಕೆ ಮಲ ಮೂತ್ರಂಗಳಿರವು ಕೀವು ಕ್ರಿಮಿಗಳು ಬರಿಯ ತೊಗಲ ಮೆಚ್ಚಿ ಕೆಡಬೇಡಿರೋ || ಹರ ಬ್ರಹ್ಮ ಸುರರಿಗೆ ವಂದಿತನಾಗಿಪ್ಪ ಹರಿ ಸರ್ವೋತ್ತಮನೆಂದೆನ್ನಿರೋ ಪುರಂದರ ವಿಠಲನ ಚರಣವ ಭಜಿಸಿರೋ ದುರಿತಭಯಗಳೆಲ್ಲವು ಪರಿಹರವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು