ಈ ಸಿರಿಯ ನಂಬಿ ಹಿಗ್ಗಲು ಬೇಡ

ಈ ಸಿರಿಯ ನಂಬಿ ಹಿಗ್ಗಲು ಬೇಡ

(ರಾಗ ಕಾಂಭೋಜ ಝಂಪೆತಾಳ) ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ ||ಪ|| ವಾಸುದೇವನ ಭಜಿಸಿ ಸುಖಿಯಾಗು ಮನವೆ || ಮಡದಿಮಕ್ಕಳುಯೆಂದು ವಡವೆವಸ್ತುಗಳೆಂದು ಸಡಗರದಿ ತಾ ಕೊಂಡು ಭ್ರಮಿಸಲೇಕೆ ಬಿಡದೆ ಯಮನಾಳುಗಳು ಬಾರೆಂದು ಎಳೆವಾಗ ಮಡದಿ ಮಕ್ಕಳು ಕಡೆಗೆ ತೊಲಗುವರೊ ಮರುಳೆ || ನೆಂಟರೂರಿಗೆ ಹೋಗಿ ನಾಲ್ಕು ದಿನವಿದ್ದರೆ ಎಂಟು ದಿನದಾಯಾಸ ಹೋಗುವಂತೆ ಉಂಟು ಸೌಭಾಗ್ಯವೆಂತೆಂಬ ಧೈರ್ಯವ ಬಿಟ್ಟು ವೈ- ಕುಂಠನ ಭಜಿಸು ಭ್ರಷ್ಟ ಮನವೆ || ಉಂಟು ಆಶ್ರಯವೆಂದು ಬಡವನ ಕರೆತಂದು ಕೊಟ್ಟು ಮಾಡಿದ ಧರ್ಮ ಫಲ ತನ್ನದು ಇಷ್ಟ ಮೂರುತಿ ನಮ್ಮ ಪುರಂದರವಿಟ್ಠಲನ ನಿಷ್ಠೆಯಿಂದಲಿ ಭಜಿಸು ದುಷ್ಟಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು