ಅಲ್ಲಿ ನೋಡಲು ರಾಮ

ಅಲ್ಲಿ ನೋಡಲು ರಾಮ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ|| ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೇ ಬೆದರಿ ಓಡಿದವು ಈವೇಳೆ ನರನಾಗಿ ಇರಬಾರದೆಂದೆಣಿಸಿ ದೇವ ರಾಮಚ್ಂದ್ರ ಜಗವೆಲ್ಲಾ ತಾನಾದ||1|| ಅವನಿಗೆ ಇವ ರಾಮ ಇವನಿಗೆ ಅವ ರಾಮ ಅವನಿಯೊಳೀಪರಿ ರೂಪವುಂಟೇ ಲವದಲ್ಲಿ ಅಸುರ ದುರುಳರೆಲ್ಲರು ಅವರವರು ಹೊಡೆದಾಡಿ ಹತರಾಗಿಹೋದರು||2|| ಹನುಮದಾದಿ ಸಾಧು ಜನರು ಅಪ್ಪಿಕೊಂಡು ಕುಣಿಕುಣಿದಾಡಿದರು ಹರುಷದಿಂದ ಕ್ಷಣದಲ್ಲಿ ಪುರ್ಂದರ ವಿಠಲರಾಯನು ಕೊನೆಗೊಡೆಯನು ತಾನೊಬ್ಬನಾಗಿ ನಿಂತ||3||
ದಾಸ ಸಾಹಿತ್ಯ ಪ್ರಕಾರ
ಬರೆದವರು