ಅನಂತಾನಂತ ಪಾಪ ಮಾಡುವೆ ನಾನು

ಅನಂತಾನಂತ ಪಾಪ ಮಾಡುವೆ ನಾನು

 

ಅನಂತಾನಂತ  ಪಾಪ ಮಾಡುವೆ ನಾನು ||ಪ||
ಅನಂತದಯಾನಿಧೆ ನೀನೋ ಹಯವದನ ||ಅ.ಪ||
 
ಮೇರು ಮಂದರಾದಿಗಳು ದಾರು ಎನ್ನ ಪಾತಕಕ್ಕೆ
ಸರಿಗಾಣಿಸೆನೆಂದರೆ ಪಾಪ ಕ್ಷೋಣಿ ಪರಮಾಣುಗಳಿಗೆ ||೧||
 
ಪೇಳು ಪಾಪವೆಂದೆನಲು ಪೇಳಲಿಕ್ಕೆ ಬಲು ಲಜ್ಜೆ-
ಗಳು ಅಂಡಲೆವುತಿದೆ ತಿಳಿದಾತ ನೀನಲ್ಲವೆ ||೨||
 
ಎನಗೊಂದು ಉಪಾಯವ ಅನಾಯಾಸ ಮಾಡುವಂಥ 
ನಿನ್ನ ನಾಮಸುಧೆಯನ್ನು ಎನಗೀಯೋ ಮುದದಿಂದ ||೩||
 
ಏಸು ಕಾಲ ಸ್ವಾಮಿ ನೀನು ದಾಸನು ಆಸು ಕಾಲದವನು
ವಾಸುದೇವವಿಠಲನೆ  ನೀ ಸಡಲ ಬಿಡುವರೇನೋ ||೪||
 
-- ವ್ಯಾಸತತ್ವಜ್ಞರು
ದಾಸ ಸಾಹಿತ್ಯ ಪ್ರಕಾರ
ಬರೆದವರು