ಅಂಜಿಕ್ಯಾಕೆನಗಂಜಿಕೆ ಕಂಜನಾಭ ಶ್ರೀನಿವಾಸನ ದಯವಿರಲು

ಅಂಜಿಕ್ಯಾಕೆನಗಂಜಿಕೆ ಕಂಜನಾಭ ಶ್ರೀನಿವಾಸನ ದಯವಿರಲು

 

ಅಂಜಿಕ್ಯಾಕೆನಗಂಜಿಕೆ
ಕಂಜನಾಭ ಶ್ರೀನಿವಾಸನ ದಯವಿರಲು ||ಪ||
 
ಅಶನವಸನವನ್ನು ಕುಳಿತಲ್ಲೆ ನಡೆಸುವ
ನಿಶಿದಿನ ನೀಚರಾಧೀನ ಮಾಡದೆ
ಹಸನಾಗಿ ತನ್ನಂಘ್ರಿ ನೆರಳೊಳು ಬಿಚ್ಚಿಟ್ಟು
ಕುಶಲದಿ ಸಾಕುವ ದ್ರೆಯ ನಂಬಿದ ಬಳಿಕ ||೧||
 
ಹುಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳ
ಕ್ಷುಲ್ಲ ಜೀವರನೆಲ್ಲ ಕಾಯುವ ಶಕ್ತಿ
ಎಲ್ಲ ವ್ಯವಹಾರವ ಮಾಡುವ ಬಲ ನನ-
ಗಿಲ್ಲೆಂದು ಆಯಾಸಬಡಲೀಸದವನಿರೆ ||೨||
 
ಆವಾವ ಕಾಲದಿ ಆವಾವ ದೇಶದಿ
ಸೇವೆಗೆ  ನಾ ತಪ್ಪೆ ಕೃಪೆ ತಪ್ಪಿಸ
ಭಾವಿಕರೊಡೆಯ ಪ್ರಸನ್ವೆಂಕಟಾದ್ರೀಶ
ಸಾವು ಕಳೆದು ಜೀವಕಾಶ್ರಯನಾಗಿರೆ ||೩||
 
--ಪ್ರಸನ್ನವೆಂಕಟದಾಸರು
 
ದಾಸ ಸಾಹಿತ್ಯ ಪ್ರಕಾರ
ಬರೆದವರು