ಹರಿದಾಸ ಸಂಪದ ಸಂಪುಟದ ಕುರಿತು

ಹರಿದಾಸ ಸಂಪದ ಸಂಪುಟದ ಕುರಿತು

ಸಂಪದ ಮೂರು ವರ್ಷಗಳಿಂದ ಅಂತರ್ಜಾಲದಲ್ಲಿ ಕನ್ನಡದ ಹೊಸ ಚಿಗುರು ಬೆಳೆಸುವಲ್ಲಿ ಯಶಸ್ವಿಯಾಗಿರುವ ಸಮುದಾಯ. ಈ ಸಮುದಾಯದಲ್ಲಿ ಸಂಗೀತ, ಹರಿದಾಸ ಸಾಹಿತ್ಯ ಕುರಿತು ನಿರಂತರ ಬರೆಯುತ್ತ ಓದುಗರಲ್ಲಿ ಚಿರಪರಿಚಿತರಾಗಿರುವ ಹಂಸಾನಂದಿಯ ನೇತೃತ್ವದಲ್ಲಿ ಹರಿದಾಸ ಸಂಪದ ಸಂಪುಟ ನಿರಂತರ ಬೆಳೆಯುತ್ತಿರುವ ವೃಕ್ಷದ ಹೊಸ ಶಾಖೆಯಾಗಿ ಪ್ರಾರಂಭವಾಗಲಿದೆ. ತಂಡ: ಹಂಸಾನಂದಿ ಸುನೀಲ ಜಯಪ್ರಕಾಶ ಅನಿಲ್ ಜೋಶಿ ಶ್ರೀಕಾಂತ ಮಿಶ್ರಿಕೋಟಿ ಶ್ರೀನಿವಾಸ್.ಪಿ.ಎಸ್ ಬಿ.ವೆಂಕಟ್ರಾಯ ಶೈಲಾಸ್ವಾಮಿ ಹಾಗೂ ನೀವು! ಈ ಯೋಜನೆಯಲ್ಲಿ ನೀವೂ ಭಾಗವಹಿಸಬಹುದು! ಹೇಗೆ ಎಂಬುದನ್ನು ತಿಳಿಯಲು ಒಂದು ಸಂದೇಶ ಹಾಕಿ. ತಾಂತ್ರಿಕ ಸಹಾಯ: ಹರಿ ಪ್ರಸಾದ್ ನಾಡಿಗ್.