Skip to main content

ಗೋಪಾಲದಾಸ

ನೀಲಗುದುರೆಯನ್ನೇರಿ...

ಧ್ರುವತಾಳ

ನೀಲಗುದುರೆಯನ್ನೇರಿ ಶಾಲು ಸೊಂಟಕ್ಕೆ ಸುತ್ತಿ
ಕಾಲುಕುಪ್ಪಸ ತೊಟ್ಟು ಮೇಲೆ ಮೋಹನ್ನ ಹಾಕಿ
ಓಲ್ಯಾಡಿಸುತ್ತ ಒಂಟಿ ಢಾಳಾಗಿ ಶೋಭಿಸಲು
ಸಾಲು ಬೆರಳುಂಗುರ ಕೈಲಿ ಖಡ್ಗವ ಪಿಡಿದು
ತೋಳು ತಾಯಿತ ಶಿರಕೆ ಮೇಲಾದ ವಸ್ತ್ರ ಸುತ್ತಿ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಇದು ಏನೋ ಚರಿತ...

ಇದು ಏನೋ ಚರಿತ ಯಂತ್ರೋದ್ಧಾರ

ಇದು ಏನೋ ಚರಿತ ಶ್ರೀಪದುಮನಾಭನ ದೂತ
ಸದಾ ಕಾಲದಲಿ ಸರ್ವರ ಹೃದಯಾಂತರ್ಗತ

ವಾರಿಧಿ ಗೋಷ್ಪಾದನೀರಂತೆ ದಾಟಿದ
ಧೀರ ಯೋಗಾಸನಧಾರಿಯಾಗಿಪ್ಪೋದು

ದುರುಳ ಕೌರವರನ್ನು ವರಗದೆಯಲಿ ಕೊಂದ
ಕರದಲ್ಲಿ ಜಪಮಾಲೆ ಧರಿಸಿ ಎಣಿಸುವದು

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಮನೆಯ ಕಟ್ಟುವರುಂಟು

ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು
ಧನವ ಗಳಿಸುವರುಂಟು ಗಳಿಸದಿದ್ದವರುಂಟು
ಧನವ ಕಟ್ಟುವರುಂಟು ದಾನ ಮಾಡುವರುಂಟು
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು
ಮಣೆಗಾರತನವಿದರೊಳೆಂದಿಗೂ ಬೇಡ
ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ
ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ

ದಾಸ ಸಾಹಿತ್ಯ ಪ್ರಕಾರ: 
ಬಗೆ: 
ಬರೆದವರು: 

ಭಾರತಿ ಭಕುತಿಯನು ಕೊಡುವದು

ರಾಗ: ಸುರಟಿ ಆದಿತಾಳ

ಭಾರತಿ ಭಕುತಿಯನು ಕೊಡುವದು ಮಾರುತ ಸತಿ ನೀನು ||ಪ||
ಮೂರು ಲೋಕದೊಳಗಾರು ನಿನಗೆ ಸರಿ | ಮಾರಾರಿಗಳಿಂದಾರಾಧಿತಳೆ ||ಅ. ಪ||

ವಾಣಿ ಎನ್ನ ವದನದಲ್ಲಿಡು ಮಾಣದೆ ಹರಿಸ್ತವನ| ವೀಣಾಧೃತ ಸುಜ್ಞಾನಿಯೆ
ಪಂಕಜ | ಪಾಣಿಯೇ ಕೋಕಿಲ ವಾಣಿಯೇ ಪಾಲಿಸೆ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages