ಶ್ರೀವಾದಿರಾಜ ಯತಿಗಳ ರಚನೆ

ಎಷ್ಟು ಸಾಹಸವಂತ ನೀನೇ ಬಲವಂತ

'ಎಷ್ಟು ಸಾಹಸವಂತ ನೀನೇ ಬಲವಂತ'
ರಚನೆ: ಶ್ರೀವಾದಿರಾಜ ಯತಿಗಳು


ಎಷ್ಟು ಸಾಹಸವಂತ ನೀನೇ ಬಲವಂತಾ ದಿಟ್ಟ ಮೂರುತಿ ಭಳಿ ಭಳಿರೇ ಹನುಮಂತಾ   || ಪ ||
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚಂಡಾಡಿದ ದಿಟ್ಟ ನೀನಹುದೋ

ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿ ಕಾರ್ಯವನು ಪ್ರೇಮದಿ ನಡೆಸಿದಿ ಈ ಮಹಿಯೊಳು ನಿನಗಾರೈ ಸಾಟಿ
ದೂರದಿಂದಸುರನ ಪುರವನ್ನು ನೋಡಿ ಭರದಿ ಶ್ರೀರಾಮರ ಸ್ಮರಣೆಯ ಮಾಡಿ
    [ ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೆ ರಘುನಾಥಾಯ ನಾಥಾಯ ಸೀತಾಯಪತಯೇ ನಮಃ ]

ದಾಸ ಸಾಹಿತ್ಯ ಪ್ರಕಾರ