ಉಗಾಭೋಗ

Haridasa compositions that fall under ugAbgOga category

ಬೆನಕನನೊಲ್ಲೆನವ್ವ

ಬೆನಕನನೊಲ್ಲೆನವ್ವ , ತುಲಕಿ ಆಡುವನ ಷಣ್ಮುಖನನೊಲ್ಲೆನವ್ವ, ಬಹುಬಾಯಿಯವನ ಇಂದ್ರನನೊಲ್ಲೆನವ್ವ , ಮೈಯೆಲ್ಲ ಕಣ್ಣನವ್ವ ಚಂದ್ರನನೊಲ್ಲೆನವ್ವ , ಕಳೆಗುಂದುವವನ ರವಿಯನೊಲ್ಲೆನವ್ವ , ಉರಿದು ಮೂಡುವನ ಹರನನೊಲ್ಲೆನವ್ವ , ಮರುಳುಗೊಂಬುವನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಾ ಒಂದೇ ಎಂಬುವರ

ಎಲ್ಲಾ ಒಂದೇ ಎಂಬುವರ ಎರಡು ದಾಡಿ ಸೀಳಿ ಹಲ್ಲುದುರಕುಟ್ಟಬೇಕು ಹರಿಭಕ್ತರಾದವರು ಸಲ್ಲದು ಸಲ್ಲದು ಈ ಮಾತು , ಸಂಶಯ ಬೇಡಿರೋ ಕಲ್ಲ ನಾರಿಯ ಮಾಡಿದ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉದಯಕಾಲದ ಜಪ

ಉದಯಕಾಲದ ಜಪ ನಾಭಿಗೆ ಸರಿಯಾಗಿ ಹೃದಯಕ್ಕೆ ಸರಿಯಾಗಿ ಮಧ್ಯಾಹ್ನದಿ ವದನಕ್ಕೆ ಸಮನಾಗಿ ಸಾಯಂಕಾಲಕೆ ನಿತ್ಯ ಪದುಮನಾಭ ತಂದೆ ಪುರಂದರವಿಠಲಗೆ ಇದೇ ಗಾಯತ್ರಿಯಿಂದ ಜಪಿಸಬೇಕೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನಮ್ಮ ಸಿರಿದೇವಿ

ಎನ್ನಮ್ಮ ಸಿರಿದೇವಿ ಇನ್ನು ಅರಿಯಳು ಮಹಿಮೆ ಕುನ್ನಿ ಮಾನವನು ನಾನೇನು ಬಲ್ಲೇನು ಪನ್ನಗಾದ್ರಿನಿಲಯನೆ ಪಾವನಮೂರ್ತಿ ಕೃಷ್ಣ ಎನ್ನನುದ್ಧರಿಸಯ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನಗೆ ನಿನ್ನಲ್ಲಿ ಭಕ್ತಿ ಇರಲಿ ಇಲ್ಲದಿರಲಿ

ಎನಗೆ ನಿನ್ನಲ್ಲಿ ಭಕ್ತಿ ಇರಲಿ ಇಲ್ಲದಿರಲಿ ಹರಿದಾಸನೆಂದೆನ್ನ ಕರೆವರು ಸಜ್ಜನರು ಹರಿದಾಸನ್ನ ಯಾಮ್ಯರು ಎಳೆವರೆಂಬ ಅಪಕೀರ್ತಿಯನ್ನು ಪರಿಹರಿಸಿಕೊಳ್ಳೊ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ತ್ರೀಯರಿಗೆ ಪುರುಷರು ಮೋಹಿಸುವರಲ್ಲದೆ

ಸ್ತ್ರೀಯರಿಗೆ ಪುರುಷರು ಮೋಹಿಸುವರಲ್ಲದೆ ಪುರುಷರಿಗೆ ಪುರುಷರು ಮೋಹಿಸುವರುಂಟೆ ಹರಿ ಪರಮಪುರುಷ ಪುರುಷೋತ್ತಮ ಪುರುಷ ಬ್ರಹ್ಮಾದಿಗಳು ನಿನಗೆ ಮೋಹಿಸುವರು ತಿರುವೇಂಗಳಪ್ಪ ಸಿರಿಪುರಂದರವಿಠಲ ಧರೆಯೊಳು ನೀನು ಮೋಹನರೂಪ ಕಾಣೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನುಂಗುಟವು ಬೊಮ್ಮಾಂಡವನೊಡೆಯಿತು

ನಿನ್ನುಂಗುಟವು ಬೊಮ್ಮಾಂಡವನೊಡೆಯಿತು ನಿನ್ನ ನಡೆ ಜಗವ ಈರಡಿ ಮಾಡಿತು ನಿನ್ನ ಪೊಕ್ಕಳು ಸರಸಿಜನಾಭನ ಪಡೆಯಿತು ನಿನ್ನ ವಕ್ಷಸ್ಥಳ ಸಿರಿಲಕುಮಿಗೆಡೆಯಾಯಿತು ನಿನ್ನ ನಳಿದೋಳು ಸಿರಿಲಕುಮಿಯ ಬಿಗಿದಪ್ಪಿತು ನಿನ್ನ ಕುಡಿನೋಟ ಸಕಲ ಜೀವರ ಪೊರೆಯಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಾ ಕೃಷ್ಣ ದ್ವಾರಕಾವಾಸ ಎಂದೆನಲು

ಹಾ ಕೃಷ್ಣ ದ್ವಾರಕಾವಾಸ ಎಂದೆನಲು ಶ್ರೀಪತಿ ಅಕ್ಷಯವಸ್ತ್ರವನಿತ್ತ ದ್ರೌಪದಿಯಭಿಮಾನವ ಕಾಯ್ದ ನಮ್ಮ ಆಪತ್ತಿಗಾಹೆನೆಂಬ ಶ್ರೀಪತಿ ಪುರಂದರವಿಠಲ ಅಕ್ಷಯವಸ್ತ್ರವನಿತ್ತು ಪಾರ್ಥನ ರಮಣಿಯ ಕಾಯ್ದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶುಭವಿದು ಶೋಭನ ಹರಿಗೆ

ಶುಭವಿದು ಶೋಭನ ಹರಿಗೆ ಶುಭವಿದು ಶೋಭನ ಸಿರಿಗೆ ಶುಭವಿದು ಪುರಂದರವಿಟ್ಠಲರಾಯನಿಗೆ ಶುಭವಿದು ಶೋಭನ ಹರಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತನ್ನ ತಾನರಿಯದಾ ಜ್ಞಾನವೇನೊ

ತನ್ನ ತಾನರಿಯದಾ ಜ್ಞಾನವೇನೊ ಚೆನ್ನ ಶ್ರೀಪುರಂದರವಿಟ್ಠಲನ ನೆನೆಯದವ ಸಂನ್ಯಾಸಿಯಾದರೇನು ಷಂಡನಾದರೆ ಏನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು