ದಾಸಾನುದಾಸ ನಾನು

ದಾಸಾನುದಾಸ ನಾನು

ಬರೆದದ್ದು : ಕನಕದಾಸರು ರಾಗ:ಶಂಕರಾಭರಣ ತಾಳ:ಅಟ ದಾಸದಾಸರ ಮನೆಯ ದಾಸಾನುದಾಸ ನಾನು ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ || ಪಲ್ಲವಿ || ಕಾಳುದಾಸರ ಮನೆಯ ಆಳು ದಾಸ ನಾನುಯ್ಯ | ಕೀಳುದಾಸನು ನಾನು ಕಿರಿಯ ದಾಸ || ಭಾಳಾಕ್ಷ ಮುಂತಾಗಿ ಭಜಿಪ ದೇವರಮನೆಯ | ಆಳಿನ ಆಳಿನ ಆಳಿನಡಿದಾಸ ನಾನು || ೧ || ಪಂಕಜನಾಭನ ಮನೆಯ ಮಂಕುದಾಸನಯ್ಯ | ಕೊಂಕುದಾಸನು ನಾನು ಕುರುಡು ದಾಸ || ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ | ಬಿಂಕದ ಬಾಗಿಲ ಕಾಯ್ವ ಬಡದಾಸ ನಾನು || ೨ || ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ | ಕುಲವಿಲ್ಲದ ದಾಸ ಕುನ್ನಿದಾಸ || ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ | ಸೆಲೆಮುಕ್ತಿ ಪಾಲಿಸೊ ಆದಿಕೇಶವರಾಯ || ೩ ||