ಅನಂತಾನಂತ ಪಾಪ ಮಾಡುವೆ ನಾನು

 

ಅನಂತಾನಂತ  ಪಾಪ ಮಾಡುವೆ ನಾನು ||ಪ||
ಅನಂತದಯಾನಿಧೆ ನೀನೋ ಹಯವದನ ||ಅ.ಪ||
 
ಮೇರು ಮಂದರಾದಿಗಳು ದಾರು ಎನ್ನ ಪಾತಕಕ್ಕೆ
ಸರಿಗಾಣಿಸೆನೆಂದರೆ ಪಾಪ ಕ್ಷೋಣಿ ಪರಮಾಣುಗಳಿಗೆ ||೧||
 
ಪೇಳು ಪಾಪವೆಂದೆನಲು ಪೇಳಲಿಕ್ಕೆ ಬಲು ಲಜ್ಜೆ-
ಗಳು ಅಂಡಲೆವುತಿದೆ ತಿಳಿದಾತ ನೀನಲ್ಲವೆ ||೨||
 
ಎನಗೊಂದು ಉಪಾಯವ ಅನಾಯಾಸ ಮಾಡುವಂಥ 
ನಿನ್ನ ನಾಮಸುಧೆಯನ್ನು ಎನಗೀಯೋ ಮುದದಿಂದ ||೩||
 
ಏಸು ಕಾಲ ಸ್ವಾಮಿ ನೀನು ದಾಸನು ಆಸು ಕಾಲದವನು
ವಾಸುದೇವವಿಠಲನೆ  ನೀ ಸಡಲ ಬಿಡುವರೇನೋ ||೪||
 
-- ವ್ಯಾಸತತ್ವಜ್ಞರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನಾದ್ಯನಂತಕಾಲದಲಿ ನೀ ನಿರ್ದೋಷ

 

ಅನಾದ್ಯನಂತಕಾಲದಲಿ ನೀ ನಿರ್ದೋಷ
ಅನಾಥಬಂಧುವೆ ಆಪ್ತಕಾಮ
ಅನವರತ ನಿನ್ನಧೀನದವನಯ್ಯ
ಕಾಣೆ ನಿನ್ನಗಲಿಪ್ಪ ಕಾಲವನ್ನು
ಜ್ಞಾನೇಚ್ಛಾಪ್ರಯತ್ನ ಚೇತನನಿಷ್ಠವೋ
ತಾನಾದರಾಗಲಿ ತನ್ನಿಯಾಮಕ ನೀನು
ಈ ನೀತಿ ಸಿದ್ಧವಾಗಿರೆ ಹಾನಿವೃದ್ಧಿಗೆ
ನಾನೇ ಕಾರಣನಲ್ಲ   ಅನಂದಮೂರ್ತಿ
ಪ್ರಾಣಾನಂತರ್ಯಾಮಿ ಶ್ರೀ ವ್ಯಾಸವಿಠಲರೇಯ
ನೀನಿಟ್ಟಪರಿಯಲ್ಲಿ ನಿಜವಾಗಿರುತಲಿಪ್ಪೆ
 
-- ಕಲ್ಲೂರು ಸುಬ್ಬಣ್ಣಾಚಾರ್ಯರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಣು ಆರಂಭಿಸಿಕೊಂಡು ಅಜತೃಣಾದಿ

 

ಅಣು ಆರಂಭಿಸಿಕೊಂಡು ಅಜತೃಣಾದಿ  ಕಲ್ಪತನಕ
ಎಣಿಸಿ ಗುಣಿಸಿ ಮನಸು ಉತ್ಸಾಹದಿಂದ
ಇನಕೋಟಿತೇಜ ವರದವ್ಯಾಸವಿಠಲ
ಬ್ರಹ್ಮನಾಳದೊಳಗೆ ಪೊಳೆವ ದ್ವಿವಿಧ ದೂರಮಾಡೋ ||
 
-- ಕಲ್ಲೂರು ಸುಬ್ಬಣ್ಣಾಚಾರ್ಯರು
 
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂತರಂಗದ ರೋಗ ಚಿಂತೆ ಪರಿಹರಿಸಿ

 

ಅಂತರಂಗದ  ರೋಗ ಚಿಂತೆ ಪರಿಹರಿಸಿ  ಮೋಕ್ಷ
ಪಂಥ ಸಾಧಿಸು ಧನ್ವಂತ್ರಿ ಪ್ರಭುವೆ ||ಪ||
 
ಸುರರು ಅಸುರರು ಕೂಡಿ ಶರಧಿಯ ಮಥಿಸಲು
ಕರದೊಳಮೃತ ಪಾತ್ರೆ ಧರಿಸಿ ನೀ ಬಂದೆ ||೧||
 
ಇಂದ್ರ ನೀಲಾಂಭ್ರಣಿ ಸನ್ನಿಭರೂಪ
ಚಂದ್ರಮಂಡಲದೊಳು ನಿಂತು ರಾಜಿಸುವಿ ||೨||
 
ಯೋಷಿತ ರೂಪದಿ ಸುಧೆಯನು ಕೊಟ್ಟು
ಪೋಷಿಸಿದೆಯೋ ಇಂದಿರೇಶ ದಿವಿಜರ  ||೩||
 
--ಪಾಂಡುರಂಗಿ ಹುಚ್ಚಾಚಾರ್ಯರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇನ್ನೆಷ್ಟು ಕಾಲಕ್ಕು ಮರಿಯಾದಂತೆ ಮಾಡಿಸಿದಿ

 

ಇನ್ನೆಷ್ಟು ಕಾಲಕ್ಕು  ಮರಿಯಾದಂತೆ ಮಾಡಿಸಿದಿ
ಉನ್ನತಮಹಿಮ ನಿನ್ನ ಇಚ್ಛಕ್ಕೆ ಇದಿರಾರೊ
ಇನ್ನಾದರೂ ಕೃಪೆಯಿಂದ ನೋಡದಿರೆ
ಘನ್ನವಾದ ದುಃಖದಿಂದ ಕಡಿಗೆ ಐದುವೆನೆಂತೊ
ಚಿನ್ಮಯಮೂರುತಿ ಗುರುವಿಜಯವಿಠಲರೇಯ
ಎನ್ನ ಅಪರಾಧವು ನಿನಗರ್ಪಿತವು
 
-- ಮೊದಲುಕಲ್ಲು ಶೇಷದಾಸರು.
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ

ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ
ಹರಿದಾಸನೆಂದೆನ್ನ ಕರೆವರು ಸಜ್ಜನರು
ಹರಿದಾಸರನು ಯಮನೆಳೆವನೆಂಬಪಕೀರ್ತಿಯ
ಪರಿಹರಿಸಿಕೊಳ್ಳೋ ಶ್ರೀ ಪುರಂದರವಿಠಲ
 
--ಪುರಂದರದಾಸರು
 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದುಶೇಖರ ಶಿವ ನಂದಿವಾಹನ

ಇಂದುಶೇಖರ ಶಿವ ನಂದಿವಾಹನ ಶೂಲಿ
ಸ್ಕಂದಗಣಪರ ತಾತ ದಂದಶೂಕಕಲಾಪ
ಮಂದಾಕಿನೀಧರ ಪುರಂದರಮುಖಸುರ-
ವೃಂದವಿನುತಪಾದದಿಂದ ಶೋಭಿತ ದೇವ
ಕಂದುಕಂಧರ ತ್ರಿಪುರಸಂದೋಹಹರ ಹರ
ವಂದಿಸಿ ಬೇಡುವೆ ಫಲ ಸಂದೇಹಮಾಡದಲಿತ್ತು
ನಂದ ನೀಡುವಿ ನೀನೆಂದು ನಿನ್ನಯ ಬಳಿಗೆ
ಬಂದೆನ್ನ ಮನೋರಥ ಇಂದು ಪೂರ್ತಿ ಸೋ ಗುರೋ
ಗಂಧವಾಹನತನಯ ಇಂದಿರಾಪತಿ ಗುರುಜಗನ್ನಾಥವಿಠಲಾ -
ನಂದಬಡುವನಿದಕೆ  ಸಂದೇಹ ಇನಿತಿಲ್ಲ
 
---ಜಗನ್ನಾಥದಾಸರು

ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದಿಗೆಂಬೋ ಚಿಂತೆ ನಾಳೆಗೆಂಬೋ ಚಿಂತೆ

 

ಇಂದಿಗೆಂಬೋ ಚಿಂತೆ ನಾಳೆಗೆಂಬೋ ಚಿಂತೆ
ನಾಡದ್ದಿಗೆಂಬೋ ಚಿಂತೆ  ತೊತ್ತಿಗ್ಯಾತಕಯ್ಯ
ಒಡೆಯನುಳ್ಳ ತೊತ್ತಿಗ್ಯಾತರ ಚಿಂತೆ
ಒಡೆಯ ಶ್ರೀನಿವಾಸ ಎಂಬೊ ಛತ್ರವಿರಲು
ಎನ್ನೊಡೆಯ ಅಚಲಾನಂದವಿಠಲ
 


--ಅಚಲಾನಂದದಾಸರು

ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದು ಕೂಡಿದೆವು ನಿಜ ಇಂದಿರೇಶನ

ಇಂದು ಕೂಡಿದೆವು ನಿಜ

ಇಂದಿರೇಶನ  ಇಂದು ಕೂಡಿದೆವು  ||ಧ್ರುವ||

 

ಇಂದೆ ಕೂಡಿದೆವಯ್ಯ

ತಂದೆ ಸದ್ಗುರು ನಿಮ್ಮ

ಎಂದೆಂದಗಲದ್ಹಾಂಗ ದ್ವಂದ್ವಂ ಶ್ರೀಪಾದ ||೧||
 

ಕಂಡು ಪಾರಣಿಗಂಡು
ಪುಣ್ಯಗೈಸಿತು ಪ್ರಾಣ
ಧನ್ಯಗೈಸಿತು ಜೀವನ ಉನ್ಮನವಾಗಿ ||೨||

ಇಂದು ಕೂಡಿದೆವು
ಬಂಧುಬಳಗ ನಮ್ಮ
ಕಂದ ಮಹಿಪತಿಸ್ವಾಮಿಯಾ ಸಂದಿಸಿ ಪಾದ ||೩||
 

-- ಮಹಿಪತಿದಾಸರು

 

 

ದಾಸ ಸಾಹಿತ್ಯ ಪ್ರಕಾರ
ಬರೆದವರು