Skip to main content

ಅಂಬಾತನಯ ಹೇರಂಬ

ಅಂಬಾತನಯ ||ಪ||
ಅಂಬಾತನಯ ಹೇರಂಬ ಪೂರ್ಣಕರು-
ಣಾಂಬುಧೇ ತವ ಚರಣಾಂಬುಜಕೆರಗುವೆ ||ಅ||

ದಶನ ಮೋದಕ ಪಾಶಾಂಕುಶ ಪಾಣೇ
ಅಸಮ ಸಹಸಚಾರುದೇಷ್ಣ ವಂದಿಪೆ    ||೧||

ವೃಂದಾರಕ ವೃಂದ ವಂದಿತ ಚರಣಾರ-
ವಿಂದ ಯುಗಳ ದಯದಿಂದ ತೋರೆನಗೆ ||೨||

ಯೂಥಪವದನ ಪ್ರದ್ಯೋತಸನ್ನಿಭ ಜಗ-
ನ್ನಾಥ ವಿಠಲನ ಸಂಪ್ರೀತಿ ವಿಷಯ ಜಯ||೩||






 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: